ಶನಿವಾರಸಂತೆ, ಏ. 5: ಕೊಡಗು ಜಿಲ್ಲಾಡಳಿತದ ಸೂಚನೆಯಂತೆ ಬೆಳಿಗ್ಗೆ 6 ಗಂಟೆಯಿಂದ 12 ಗಂಟೆ ತನಕ ಮಾತ್ರ ಶನಿವಾರಸಂತೆಯಲ್ಲಿ ಶುಕ್ರವಾರ ನಿತ್ಯೋಪಯೋಗಿ ತರಕಾರಿ, ದಿನಸಿ ಸಾಮಗ್ರಿಗಳನ್ನು ಖರೀದಿಸಲು ಜನತೆ ಮುಗಿಬಿದ್ದರು.
ಸುತ್ತಮುತ್ತಲ ಗ್ರಾಮಗಳಿಂದ ಸಾರ್ವಜನಿಕರು ತರಕಾರಿ ದಿನಸಿಗಾಗಿ ಅಂಗಡಿಗಳು ತೆರೆಯುವ ಮುನ್ನವೇ ಹಾಜರಾಗಿದ್ದರು. ಪೊಲೀಸರು, ಗ್ರಾಹಕರು ಆಹಾರ ಸಾಮಗ್ರಿಗಳನ್ನು ಖರೀದಿಸುವ ಸಂದರ್ಭ ಧ್ವನಿವರ್ಧಕದ ಮೂಲಕ ಸರತಿ ಸಾಲಿನಲ್ಲಿ ಅಂತರ ಕಾಯ್ದುಕೊಂಡು ಸಾಮಗ್ರಿಗಳನ್ನು ಖರೀದಿಸುವಂತೆ ಸೂಚಿಸುತ್ತಿದ್ದರು. ತರಕಾರಿ ದಿನಸಿ ಖರೀದಿಸಿದ ನಂತರ 12 ಗಂಟೆಯಾಗುತ್ತಿದ್ದಂತೆ ದಿನಸಿ ಅಂಗಡಿ, ತರಕಾರಿ ಅಂಗಡಿಗಳ ವ್ಯಾಪಾರ ಸ್ಥಗಿತಗೊಂಡು ಬಾಗಿಲು ಹಾಕುತ್ತಿದ್ದಂತೆ ಸಾರ್ವಜನಿಕರು ತಮ್ಮ ವಾಹನಗಳೊಂದಿಗೆ ಹೊರಟು ಹೋದರು. ಇಡೀ ಶನಿವಾರಸಂತೆ ಪಟ್ಟಣವೇ ಸ್ತಬ್ಧವಾಯಿತು.