ಮಡಿಕೇರಿ, ಏ. 4: ಮಡಿಕೇರಿಯ ಹಿರಿಯ ನಾಗರಿಕ ಪಿ.ಎಂ. ಸುಬ್ಬಮ್ಮಯ್ಯ ಅವರು ಮುಖ್ಯಮಂತ್ರಿಗಳ ಕೋವಿಡ್-19 ಪರಿಹಾರ ನಿಧಿಗೆ ರೂ. 1 ಲಕ್ಷ ನೆರವು ನೀಡಿದರು.
ಹಿರಿಯ ಪತ್ರಕರ್ತ ಜಿ. ಚಿದ್ವಿಲಾಸ್ ಅವರ ಸಮ್ಮುಖದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರಿಗೆ ರೂ. 1 ಲಕ್ಷ ಮೊತ್ತದ ಚೆಕ್‍ಅನ್ನು ಹಸ್ತಾಂತರಿಸಿದರು. ಈ ಸಂದರ್ಭ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಉಪಸ್ಥಿತರಿದ್ದರು.