ಮಡಿಕೇರಿ, ಏ. 4: ಕೊಡಗು ಪತ್ರ್ರಿಕಾ ಭವನ ಟ್ರಸ್ಟ್ ವತಿಯಿಂದ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸರಿಗೆ ಮಾಸ್ಕ್ ಅನ್ನು ವಿತರಿಸಲಾಯಿತು.
ಕೊರೊನಾ ಮುನ್ನೆಚ್ಚರಿಕೆಗಾಗಿ ಕರ್ತವ್ಯ ನಿರತ ಪೊಲೀಸರ ಆರೋಗ್ಯ ದ ಹಿತದೃಷ್ಟಿಯಿಂದ ಪತ್ರಿಕಾ ಭವನ ಮ್ಯಾನೇಜಿಂಗ್ ಟ್ರಸ್ಟಿ ಬಿ.ಎನ್ ಮನು ಶೆಣೈ ರವರು 500 ಮಾಸ್ಕ್ಗಳನ್ನು ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಪನ್ನೆಕರ್ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭ ಟ್ರಸ್ಟಿಗಳಾದ ಜಿ. ಚಿದ್ವಿಲಾಸ್, ಕೆ.ತಿಮ್ಮಪ್ಪ, ಕೋಶಾಧಿಕಾರಿ ಎಂ.ಪಿ.ಕೇಶವ ಕಾಮತ್ ಉಪಸ್ಥಿತರಿದ್ದರು.