ನಾಪೆÇೀಕ್ಲು, ಏ. 4: ಕೊರೊನಾ ಸೋಂಕು ವ್ಯಾಪಕವಾಗಿ ಹರಡು ವದನ್ನು ತಡೆಗಟ್ಟಲು ಜಿಲ್ಲಾಡಳಿತ ಹೇರಿದ್ದ ನಿರ್ಬಂಧಗಳಿಂದಾಗಿ ಗ್ರಾಮಸ್ಥರಿಗೆ ದಿನಸಿ, ತರಕಾರಿ ಹಾಗೂ ಅಗತ್ಯ ವಸ್ತುಗಳ ಕೊರತೆ ಉಂಟಾಗಿದೆ. ಇದನ್ನು ತಡೆಗಟ್ಟಲು ನೆಲಜಿ ಫಾರ್ಮರ್ಸ್ ರಿಕ್ರಿಯೇಶನ್ ಅಂಡ್ ಡೆವಲಪ್‍ಮೆಂಟ್ ಕ್ಲಬ್ ಗ್ರಾಮದ ಜನರಿಗೆ ಅಗತ್ಯ ವಸ್ತುಗಳ ಖರೀದಿ ಕೇಂದ್ರ ಆರಂಭಿಸಿದೆ.
ಅಗತ್ಯ ವಸ್ತುಗಳಿಗಾಗಿ ಗ್ರಾಮದ ಜನತೆ ಹೋಬಳಿ ಕೇಂದ್ರವಾದ ನಾಪೆÇೀಕ್ಲುವಿಗೆ ತೆರಳಬೇಕು. ನಿರ್ದಿಷ್ಟ ದಿನಗಳು, ನಿಗದಿತ ಅವಧಿ, ವಾಹನಗಳ ಕೊರತೆ, ಹೆಚ್ಚಿನ ಜನಸಾಂದ್ರತೆಯಿಂದ ದಿನಸಿ ಖರೀದಿಸಲು ಉಂಟಾಗು ತ್ತಿರುವ ತೊಂದರೆಯ ಹಿನ್ನೆಲೆಯಲ್ಲಿ ಕ್ಲಬ್ ಈ ವ್ಯವಸ್ಥೆ ಕೈಗೊಂಡಿದೆ.
ಕಳೆದ ಸೋಮವಾರದಿಂದ ಕ್ಲಬ್‍ನಲ್ಲಿ ವ್ಯಾಪಾರ ವಹಿವಾಟು ಆರಂಭಗೊಂಡಿದ್ದು, ಗ್ರಾಮಸ್ಥರು ದಿನಸಿ ಖರೀದಿಗೆ ಕ್ಲಬ್‍ನ್ನು ಅವಲಂಬಿಸಿದ್ದಾರೆ. ಬಲ್ಲಮಾವಟಿ ಗ್ರಾಮ ಪಂಚಾಯಿತಿಯಿಂದ ಮಾರಾಟಕ್ಕೆ ಅನುಮತಿಯನ್ನು ಪಡೆದುಕೊಳ್ಳಲಾಗಿದೆ. ಕ್ಲಬ್ ಎದುರು ನಿಗದಿತ ಅಂತರದಲ್ಲಿ ವೃತ್ತಗಳನ್ನು ನಿರ್ಮಿಸಿ ಗ್ರಾಮಸ್ಥರು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ದಿನಸಿ ಮತ್ತಿತರ ಸಾಮಗ್ರಿಗಳನ್ನು ಖರೀದಿಸುವ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಬಲ್ಲಮಾವಟಿ ಗ್ರಾಮ ಪಂಚಾಯಿತಿಗೆ ಒಳಪಟ್ಟ ಬಲ್ಲಮಾವಟಿ, ನೆಲಜಿ, ಪೇರೂರು ಹಾಗೂ ಪುಲಿಕೋಟು ಗ್ರಾಮಸ್ಥರು ಕ್ಲಬ್‍ನ ಮಾರಾಟ ಮಳಿಗೆಯಿಂದ ಲಾಕ್‍ಡೌನ್ ಅವಧಿಯಲ್ಲಿ ಅಗತ್ಯ ವಸ್ತುಗಳನ್ನು ಖರೀದಿಸಬಹುದು ಎಂದು ಕ್ಲಬ್‍ನ ಅಧ್ಯಕ್ಷ ಮಂಡೀರ ನಂದ ನಂಜಪ್ಪ ತಿಳಿಸಿದ್ದಾರೆ.