ತಾ. 4 ರ ‘ಶಕ್ತಿ’ಯ ‘ಕತ್ತಲಿನಿಂದ ಬೆಳಕಿನೆಡೆಗೆ’ ಎಂಬ ಸಮೃದ್ಧಿ ದಾರೆಯೆರೆಯುವ ಸಂಪಾದಕೀಯ ಜನ-ಮನ ಪರಿವರ್ತನೆಯಾಗುವ ಸಂದೇಶದಂತಿತ್ತು.

ಪ್ರಧಾನಮಂತ್ರಿಯವರ ಮನದಾಳದ ಮಾತನ್ನು ಪ್ರತಿಬಿಂಬಿಸಿ ಎಲ್ಲ ಸಮುದಾಯದ ಜನರನ್ನು ಜಾಗೃತಿಗೊಳಿಸುವಂತಹ ಮಹತ್ಕಾರ್ಯವನ್ನು “ಶಕ್ತಿ” ತನ್ನ ಹುಟ್ಟಿನಿಂದಲೇ ಮಾಡಿಕೊಂಡು ಬಂದಿದೆ. ಎಂತಹ ಸತ್ಕಾರ್ಯದ ಮೂಲಕ ಜನರ ಮತ್ತು ಸರಕಾರದ ಮಧುರ ಬಾಂಧವ್ಯದ ಸೇತುವೆಯಾಗಿ ನಿಲ್ಲುತ್ತಿದೆ ಎಂಬುದಕ್ಕೆ ಜಿ. ರಾಜೇಂದ್ರ ಅವರ ಈ ಸಂಪಾದಕೀಯ ಒಂದು ಜ್ವಲಂತ ಸಾಕ್ಷಿ. ಪ್ರಧಾನಿಯವರ ಚಿಂತನೆ ಅದ್ಭುತವಾಗಿದೆ. ಸರ್ವ ಜನಾಂಗದ ಶಾಂತಿಯ ತೋಟವೆನಿಸಿರುವ ಶಾಂತಿಪ್ರಿಯ ಕೊಡಗಿನ ಜನ-ಮನ ಸರಕಾರದ ಈ ದಿಟ್ಟ ಹೋರಾಟದಲ್ಲಿ ಕೈ ಜೋಡಿಸಲಿದೆ ಎಂಬ ಹಾರೈಕೆ ನಮ್ಮದು.

- ಬೈ.ಶ್ರೀ. ಪ್ರಕಾಶ್, ಮಡಿಕೇರಿ.

ಸಂಪಾದಕೀಯ ಚೆನ್ನಾಗಿ ಮೂಡಿಬಂದಿದೆ

ಕತ್ತಲಿನಿಂದ ಬೆಳಕಿನೆಡೆಗೆ-ಬೆಳಕು ಉದ್ದೀಪನಕ್ಕೆ ಸದವಕಾಶ ಸಂಪಾದಕೀಯ ಅತ್ಯದ್ಭುತವಾಗಿದೆ. ಊರಿರುವಲ್ಲಿ ಕೊಳಕುಕೇರಿ ಎಂಬಂತೆ ಪ್ರಧಾನಿಗಳ ಈ ಕಳಕಳಿಯ ಕರೆಯನ್ನು ಹಲವರು ವಿರೋಧಿಸಿರಬಹುದು. ಆದರೆ ಸಂಪಾದಕೀಯದಲ್ಲಿ ಹೇಳಿರುವಂತೆ, ನಮ್ಮ ನಮ್ಮ ಅಂತರಾತ್ಮದ ಬೆಳಕನ್ನು ಉದ್ದೀಪನಗೊಳಿಸಲು ಇದೊಂದು ಸದವಕಾಶ. ಅತ್ಯುತ್ತಮ ಲೇಖನಕ್ಕಾಗಿ ಧನ್ಯವಾದಗಳು!

- ಕೆ.ಎಸ್. ಮೂರ್ತಿ, ಕುಶಾಲನಗರ.