ನಾಪೋಕ್ಲು, ಏ. 4: ಪಟ್ಟಣದಲ್ಲಿ ಶುಕ್ರವಾರ ಜನದಟ್ಟಣೆಗಿಂತಲೂ ವಾಹನ ದಟ್ಟಣೆ ಹೆಚ್ಚಾಗಿ ಕಂಡುಬಂತು. ಬಸ್ ಓಡಾಟಗಳು ಸ್ಥಗಿತಗೊಂಡಿದ್ದ ಕಾರಣ ಗ್ರಾಮೀಣ ಪ್ರದೇಶಗಳಿಂದ ದಿನಸಿ ಖರೀದಿಸಲು ಜನರು ಸ್ವಂತ ವಾಹನಗಳಲ್ಲಿ ಆಗಮಿಸಿದ್ದು ಪಟ್ಟಣದಲ್ಲಿ ವಾಹನ ದಟ್ಟಣೆ ಹೆಚ್ಚಾಗಿತ್ತು. ದಿನಸಿ ಹಾಗೂ ತರಕಾರಿಗಳ ಬೆಲೆ ದುಪ್ಪಟ್ಟಾಗಿದ್ದು ಮಾರಾಟಗಾರರು ಅಧಿಕ ಬೆಲೆಗೆ ಮಾರುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು. ಸಂಬಂಧಪಟ್ಟವರು ದರ ಹೆಚ್ಚಳವಾಗದಂತೆ ಕಡಿವಾಣ ಹಾಕಬೇಕು ಎಂದು ಗ್ರಾಮೀಣ ವಾಸಿಗಳು ಒತ್ತಾಯಿಸಿದ್ದಾರೆ.