ವೀರಾಜಪೇಟೆ, ಏ. 4: ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನೇತೃತ್ವದಲ್ಲಿ , ತಾಲೂಕು ಕಾನೂನು ಸೇವಾ ಸಮಿತಿ ವತಿಯಿಂದ ಸಾರ್ವಜನಿಕರಲ್ಲಿ ಕೊರೊನಾ ವೈರಸ್ನ ಅರಿವು ಮೂಡಿಸುವ ಜಾಗೃತಿ ಅಭಿಯಾನದ ವಾಹನಕ್ಕೆ ವೀರಾಜಪೇಟೆ ಸಮುಚ್ಚಯ ನ್ಯಾಯಾಲಯಗಳ ಹಿರಿಯ ಸಿವಿಲ್ ನ್ಯಾಯಾಧೀಶ ಡಿ.ಆರ್. ಜಯಪ್ರಕಾಶ್ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ಕೊರೊನಾ ವೈರಸ್ ಸಾಮಾನ್ಯ ರೋಗವಲ್ಲ. ಭಯಂಕರ ಮಾರಕ ರೋಗ. ನಮ್ಮ ರಾಷ್ಟ್ರವಲ್ಲದೆ ಇಡಿ ವಿಶ್ವಕ್ಕೆ ಹರಡಿದೆ. ಇಂದು ವೈರಸ್ ಹಾಗೂ ಮಾನವ ಸಂಕುಲದ ನಡುವೆ ಯುದ್ಧ ನಡೆಯುತ್ತಿದೆ. ಅಂತಹ ಯುದ್ಧದಿಂದ ಹೊರ ಬಂದು ನಾವುಗಳು ಗೆಲುವು ಸಾಧಿಸಬೇಕಾಗಿದೆ. ಇದಕ್ಕಾಗಿ ಇಂದು ನಾವುಗಳು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಮೂಲಕ ನಮ್ಮನ್ನು ನಾವೇ ರಕ್ಷಿಸಿಕೊಳ್ಳುವುದರಿಂದ ಕಾಯಿಲೆಯನ್ನು ತಡೆಗಟ್ಟಬಹುದಾಗಿದೆ. ನಮ್ಮ ಮೇಲೆ ಈ ಕಾಯಿಲೆ ಬಂದಾಗ ಸೋಂಕು ಹರಡಿದಾಗ ನಾವು ನುಣುಚಿ ಕೊಳ್ಳುವ ಸಂದರ್ಭ ಬರುವುದಿಲ್ಲ. ನೈಜಾಂಶವನ್ನು ಕಾಪಾಡಿಕೊಂಡು ನಾವು ನಮ್ಮನ್ನು ರಕ್ಷಿಸಿಕೊಳ್ಳುವುz Àರೊಂದಿಗೆ ಅಮಾನವೀಯ ಮನು ಕುಲವನ್ನು ರಕ್ಷಿಸಬೇಕಾಗಿದೆ. ಇದಕ್ಕೆ ಪ್ರತಿಯೊಬ್ಬರ ಸಕಾಲಿಕ ಪ್ರಯತ್ನ ಅಗತ್ಯ ಎಂದರು.
ಇದೇ ಸಂದರ್ಭದಲ್ಲಿ ಜೆ.ಎಂ.ಎಫ್.ಸಿ ನ್ಯಾಯಾಧೀಶ ಕೋನಪ್ಪ, ಅಡಿಷನಲ್ ಸಿವಿಲ್ ನ್ಯಾಯಾಧೀಶೆ ಮಹಾಲಕ್ಷ್ಮಿ, ವೃತ್ತ ನಿರೀಕ್ಷಕ ಕ್ಯಾತೆಗೌಡ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀಧರ್ ಉಪಸ್ಥಿತರಿದ್ದರು.