ಚೆಟ್ಟಳ್ಳಿ, ಏ. 4: ಕೊರೊನಾ ವೈರಸ್‍ನ ಸೋಂಕಿನಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದ್ದು, ಸಾರ್ವಜನಿಕರಿಗೆ ಸಣ್ಣಮಟ್ಟದ ಸಹಾಯ ಮಾಡುವ ಉದ್ದೇಶದಿಂದ ಕುಶಾಲನಗರದ ನಿಸರ್ಗಧಾಮ ಟೂರಿಸ್ಟ್ ಸೆಂಟರ್‍ನಲ್ಲಿ ಉಚಿತವಾಗಿ ಶುದ್ಧ ಕುಡಿಯುವ ನೀರನ್ನು ವಿತರಿಸಲಾಗುತ್ತಿದೆ. ಎನ್.ಟಿ.ಸಿ.ಯ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ನೀರನ್ನು ತುಂಬಲು ಮೂರು ಬಿಂದುಗಳಿದ್ದು, ಒಬ್ಬ ವ್ಯಕ್ತಿಗೆ 20 ಲೀಟರ್‍ನ ಎರಡು ಕ್ಯಾನ್‍ನಲ್ಲಿ ನೀರನ್ನು ತುಂಬಲು ಅವಕಾಶ ಕಲ್ಪಿಸಲಾಗಿದೆ. ನೀರಿನ ಘಟಕ ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 10ರ ತನಕ ತೆರದಿರಲಿದೆ. ಕುಶಾಲನಗರದ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ನೀರಿಗಾಗಿ ಸಾಲು ನಿಲ್ಲುತ್ತಿದ್ದು, ಸಾರ್ವಜನಿಕರು ಎನ್.ಟಿ.ಸಿ.ಯ ನೀರಿನ ಘಟಕವನ್ನು ಬಳಸಿದ್ದಲ್ಲಿ ಗುಂಪು ಸೇರುವಿಕೆಯನ್ನು ನಿಯಂತ್ರಿಸಬಹುದಾಗಿದೆ. ಆದ್ದರಿಂದ ಸಾರ್ವಜನಿಕರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಎನ್.ಟಿ.ಸಿ. ಮಾಲೀಕ ಅಬ್ದುಲ್ ಸಲಾಂ ರಾವತರ್ ತಿಳಿಸಿದ್ದಾರೆ.