ಗೋಣಿಕೊಪ್ಪ ವರದಿ, ಏ. 3 : ಕೊರೊನಾ ವೈರಸ್ ಆತಂಕದ ನಡುವೆ ಸುದ್ದಿ ಮೂಲಕ ಸಾಮಾಜಿಕ ಜವಬ್ದಾರಿ ನಿಭಾಯಿಸುತ್ತಿರುವ ಮಾಧ್ಯಮ ಪ್ರತಿನಿಧಿಗಳಿಗೆ ದಾನಿ, ಕಾಂಗ್ರೆಸ್ ಪಕ್ಷದ ಪೊನ್ನಂಪೇಟೆ ಬ್ಲಾಕ್ ಅಧ್ಯಕ್ಷ ಮೀದೇರಿರ ನವೀನ್ ಅಗತ್ಯ ವಸ್ತುಗಳ ಕಿಟ್ ನೀಡುವ ಮೂಲಕ ಪ್ರೋತ್ಸಾಹ ನೀಡಿದರು.
ಗೋಣಿಕೊಪ್ಪ ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ವಿತರಣೆ ಮಾಡಲಾಯಿತು. ಸುಮಾರು 13 ಪತ್ರಕರ್ತರು ಇದರ ಪ್ರಯೋಜನ ಪಡೆದುಕೊಂಡರು. ಈ ಸಂದರ್ಭ ಗೋಣಿಕೊಪ್ಪ ಪ್ರೆಸ್‍ಕ್ಲಬ್ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ, ಕಾರ್ಯದರ್ಶಿ ಎಚ್. ಕೆ. ಜಗದೀಶ್, ಸದಸ್ಯರು ಹಾಗೂ ಜಿ ಪಂ.ಮಾಜಿ ಸದಸ್ಯ ಕೆ. ಬಾಲಕೃಷ್ಣ ಇದ್ದರು.