ಕಣಿವೆ, ಏ. 3 : ಮಾರಕ ವೈರಸ್ ಮಣಿಸಲು ಹೆಣೆದ ಲಾಕ್‍ಡೌನ್ ವ್ಯವಸ್ಥೆಯಿಂದಾಗಿ ಜನಸಾಮಾನ್ಯರಿಗೆ ತೊಂದರೆಯಾಗದಂತೆ ಅಗತ್ಯ ವಸ್ತುಗಳನ್ನು ಪೂರೈಸುತ್ತಿರು ವುದೇನೋ ಸರಿ. ಆದರೆ, ಆರೋಗ್ಯಕ್ಕೆ ಸಂಬಂಧಿಸಿದಂತೆ ತಲೆಕೂದಲು ಹಾಗೂ ಗಡ್ಡವನ್ನು ತೆಗೆಯುವ ಕ್ಷೌರದ ಅಂಗಡಿಗಳನ್ನು ತೆರೆಯುವ ಕೆಲಸವಾಗಬೇಕು ಎಂಬುದು ಹಲವರ ಒತ್ತಾಯ ವಾಗಿದೆ. ಅಂಗಡಿಯಲ್ಲಿ ಸಿಗುವ ಸಾಮಾನು, ಮೆಡಿಕಲ್ ಸ್ಟೋರ್ ನಲ್ಲಿರುವ ಔಷಧಿ ಪಡೆಯಲು ಮಾಸ್ಕ್ ಧರಿಸುವುದು ಸರಿ.
ಆದರೆ ಕ್ಷೌರದಂಗಡಿಯಲ್ಲಿ ಮಾಸ್ಕ್ ಧರಿಸಿ ಕ್ಷೌರಿಕರೇನೋ ಕೂದಲು ಕತ್ತರಿಸುತ್ತಾರೆ. ಆದರೆ ಕೂದಲು ಕತ್ತರಿಸಲು ಬಂದವರು ಮಾಸ್ಕ್ ಧರಿಸಬೇಕಲ್ಲವೇ ಅದು ಸಮಸ್ಯೆ. ಜೊತೆಗೆ ಸಾಮಾಜಿಕ ಅಂತರವೂ ಸಾಧ್ಯವಾಗಲ್ಲ ಎಂಬುದು ಕೂಡ ಇಲ್ಲಿ ವಾಸ್ತವ ಸಂಗತಿ. ಹಾಗಾಗಿ ಲಾಕ್ ಡೌನ್ ಮುಗಿಯುವವರೆಗೂ ತಲೆಕೂದಲು ಮತ್ತು ಗಡ್ಡ ವನ್ನು ಬೆಳೆಸಿಕೊಳ್ಳದೇ ಬೇರೆ ಮಾರ್ಗವೇ ಇಲ್ಲ...! ಆರ್ಥಿಕವಾಗಿ ಹಿಂದುಳಿದ ವಿವಿಧ ಸಮೂಹಗಳಿಗೆ ಸರ್ಕಾರ ನೀಡುವ ಪ್ರೋತ್ಸಾಹ ಧನ ಹಾಗೂ ಸಹಾಯ ಧನವನ್ನು ನಮಗೂ ಸರ್ಕಾರ ಒದಗಿಸಬೇಕು. ಸಂಕಷ್ಟ ದಲ್ಲಿರುವ ಕ್ಷೌರಿಕರನ್ನು ಪರಿಗಣಿಸ ಬೇಕೆಂದು ಕ್ಷೌರಿಕ ಕುಶಾಲನಗರದ ನಾಗೇಶ್ ಒತ್ತಾಯಿಸಿದ್ದಾರೆ. -ಮೂರ್ತಿ