ಕೂಡಿಗೆ, ಏ.3: ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅನೇಕರು ಮನಬಂದಂತೆ ವಾಹನ ಚಲಾಯಿಸಿ ಲಾಕ್‍ಡೌನ್ ಉಲ್ಲಂಘಿಸಿದ ಕಾರಣ ಅವರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ನಂದೀಶ್ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ವಿವೇಕ್, ಪ್ರಸನ್ನ, ಗಣೇಶ ಮೊದಲಾದ ವರು ಇದ್ದರು. ನಾಲ್ಕು ಬೈಕ್ ಮತ್ತು ಒಂದು ಮಾರುತಿ ವಾಹನವನ್ನು ಮುಟ್ಟುಗೋಲು ಹಾಕಿಕೊಂಡಿರುತ್ತಾರೆ.