ಮಡಿಕೇರಿ, ಏ. 3: ಮಡಿಕೇರಿಯಲ್ಲಿ ಬೀದಿನಾಯಿಗಳು ನೀರು, ಆಹಾರ ಸಿಗದೆ ಬಳಲಿ ಬೆಂಡಾದ ಸಮಯದಲ್ಲಿ, ಇದನ್ನು ಮನಗಂಡÀ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕಾರ್ಯಕರ್ತರಾದ ಮಡಿಕೇರಿಯ ಕಲೀಲ್, ಶಾಹಿನ್ಸಾ ಮತ್ತು ಸಾಜಿದ್ ಎಂಬವರು ಬೀದಿನಾಯಿ ಗಳಿಗೆ ಆಹಾರ ಕೊಟ್ಟು ನಾಯಿಯನ್ನು ಉಪಚರಿಸುತ್ತಿದ್ದಾರೆ. ಕೊರೊನಾ ಮಾರಕವಾಗಿ ಬಂದಿದೆ ಆದಷ್ಟು ಬೇಗ ಪ್ರಪಂಚದಿಂದ ಈ ವಿಷಕರವಾದ ರೋಗಾಣು ಕೊರೊನಾ ತೊಲಗಲಿ ಎಂದು ಪ್ರಾರ್ಥಿಸುತ್ತಾ, ಮಾನವೀಯತೆಯನ್ನು ಮೆರೆದ ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರ ಬಗ್ಗೆ ಶ್ಲಾಘನೆ ವ್ಯಕ್ತಗೊಂಡಿದೆ.