ಸುಂಟಿಕೊಪ್ಪ, ಏ. 3: ಸುಂಟಿಕೊಪ್ಪ ಪಟ್ಟಣದ ಮಾರುಕಟ್ಟೆ ಸುತ್ತಮುತ್ತಲಿನಲ್ಲಿ ಅನ್ನಕ್ಕೂ ನೀರಿಗೂ ಗತಿ ಇಲ್ಲದೆ ರಸ್ತೆ ಬದಿಯಲ್ಲಿ ತಿರುಗಾಡುತ್ತ ಮಲಗುತ್ತಿದ್ದ ನಿರ್ಗತಿಕರನ್ನು ಸುಂಟಿಕೊಪ್ಪ ಜೆಸಿಐ ಹಾಗೂ ವಿಕಾಸ್ ಜನಸೇವಾ ಟ್ರಸ್ಟ್ ವತಿಯಿಂದ ಸುಂಟಿಕೊಪ್ಪ ಗ್ರಾ.ಪಂ.ಯ ಪಿಡಿಓ ವೇಣುಗೋಪಾಲ್, ಪೊಲೀಸ್ ಠಾಣಾಧಿಕಾರಿ ತಿಮ್ಮಪ್ಪ ಹಾಗೂ ಸುಂಟಿಕೊಪ್ಪ ಸಮಾಜ ಸೇವಕರ ಸಹಕಾರದೊಂದಿಗೆ ರಕ್ಷಣಾ ಕಾರ್ಯವನ್ನು ನಡೆಸಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಆಶ್ರಮಕ್ಕೆ ಸೇರಿಸಲಾಯಿತು. ವಿಕಾಸ್ ಜನ ಸೇವಾ ಟ್ರಸ್ಟ್‍ನ ಅಧ್ಯಕ್ಷ ಹಾಗೂ ಜೆಸಿಐ ಸುಂಟಿಕೊಪ್ಪದ ಅಧ್ಯಕ್ಷ ರಮೇಶ್ ಹೆಚ್. ಕೆ. ಮತ್ತು ಸ್ವಸ್ಥ ಶಾಲೆಯ ಸಿ.ಬಿ.ಆರ್. ಸಂಯೋಜಕ ಹಾಗೂ ಜೆಸಿಐ ಸುಂಟಿಕೊಪ್ಪದ ಸಹ ಕಾರ್ಯದರ್ಶಿ ಮುರುಗೇಶ, ಜೆಸಿಐ ಸುಂಟಿಕೊಪ್ಪದ ನಿಕಟಪೂರ್ವ ಅಧ್ಯಕ್ಷ ಅರುಣ್ ಕುಮಾರ್, ಜೆಸಿಐ ಸದಸ್ಯ ಪ್ರೀತಂ, ಗ್ರಾ.ಪಂ.ಯ ಪೌರ ಕಾರ್ಮಿಕರು, ಸಾರ್ವಜನಿಕರು ಇದ್ದರು.