ನಾಪೆÇೀಕ್ಲು, ಏ. 2: ಇಡೀ ವಿಶ್ವವೇ ಕೊರೊನಾ ಭಯದಿಂದ ನಡುಗುತ್ತಿದೆ. ಇದರನ್ವಯ ದೇಶ, ರಾಜ್ಯ, ಜಿಲ್ಲೆ ಸೇರಿದಂತೆ ಎಲ್ಲಾ ಕಡೆಗಳಲ್ಲಿಯೂ ಮುಂಜಾಗೃತಾ ಕ್ರಮವಾಗಿ ಔಷಧಿ ಸಿಂಪಡಣೆ ಮತ್ತಿತರ ಜಾಗೃತಿ ಕಾರ್ಯಗಳು ನಡೆಯುತ್ತಿದೆ. ಪೆÇಲೀಸ್ ಇಲಾಖಾ ಸಿಬ್ಬಂದಿ ದಿನದ 24 ಗಂಟೆ ಸಾರ್ವಜನಿಕರ ಸೇವೆಗೆ ಶ್ರಮಿಸುತ್ತಿದ್ದಾರೆ. ಆದರೆ ಸಮಾಜವನ್ನು ಕಾಯುತ್ತಿರುವ ಅವರಿಗೆ ಅವರ ಕುಟುಂಬದವರಿಗೆ ರಕ್ಷಣೆ ಇಲ್ಲದ ಪರಿಸ್ಥಿತಿ ಇಲ್ಲಿ ನಿರ್ಮಾಣವಾಗಿದೆ. ಇದಕ್ಕೆ ಉದಾಹರಣೆ ನಾಪೆÇೀಕ್ಲು ಪೆÇಲೀಸ್ ಠಾಣೆಯ ನೂತನ ಪೆÇಲೀಸ್ ವಸತಿ ಗೃಹದ ಶೌಚಾಲಯದ ಗುಂಡಿ.
ನಾಪೆÇೀಕ್ಲು ನಾಡಕಚೇರಿ ಸಮೀಪದ ರಸ್ತೆಯ ಬಳಿಯಿರುವ ಶೌಚಾಲಯದ ಗುಂಡಿ ತುಂಬಿ ರಸ್ತೆಯಲ್ಲಿ ಹರಿಯುತ್ತಿದೆ. ಈ ರಸ್ತೆಗಾಗಿ ಕಂದಾಯ ಇಲಾಖೆಗೆ, ಪಶುಪಾಲನಾ ಕೇಂದ್ರಕ್ಕೆ, ವಿದ್ಯುತ್ ಇಲಾಖಾ ಕಚೇರಿಗೆ ಜನ ಪ್ರತಿನಿತ್ಯ ಹೋರಾಡುತ್ತಿದ್ದಾರೆ. ಅದರೊಂದಿಗೆ ಈ ವಸತಿ ಗೃಹದಲ್ಲಿ ಪೆÇಲೀಸರ 12 ಕುಟುಂಬಗಳು, ಮಕ್ಕಳು ಕೂಡ ವಾಸಿಸುತ್ತಿದ್ದಾರೆ. ಇವರೆಲ್ಲರಿಗೂ ಇದು ಮಾರಕವಾಗಿ ಪರಿಣಮಿಸಿದೆ. ಇದರಿಂದ ಯಾವುದಾದರೂ ರೋಗ ಉಂಟಾದರೆ ಇದಕ್ಕೆ ಯಾರು ಹೊಣೆ? ಎಂಬದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಪೆÇಲೀಸರಿಂದಲೇ ಸ್ವಚ್ಛತೆ: ವಸತಿ ಗೃಹದಲ್ಲಿ ವಾಸಿಸುತ್ತಿರುವ ಪೆÇಲೀಸರು ತಮ್ಮದೇ ಹಣ ಸಂಗ್ರಹಿಸಿ ಸುಮಾರು 25 ಸಾವಿರ ರೂ. ವೆಚ್ಚದಲ್ಲಿ ಎರಡು ತಿಂಗಳ ಹಿಂದೆ ಈ ಗುಂಡಿಯನ್ನು ಸ್ವಚ್ಛಗೊಳಿಸಿದ್ದರು. ಆದರೆ ಈಗ ಪುನಃ ಈ ಗುಂಡಿ ಮುಚ್ಚಿರುವದು ಅವರಿಗೆ ನುಂಗಲಾರದ ತುತ್ತಾಗಿದೆ. ಆದುದರಿಂದ ಸಂಬಂಧಪಟ್ಟವರು ಇದರ ದುರಸ್ತಿಗೆ ಕೂಡಲೇ ಕ್ರಮಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. -ಪಿ.ವಿ.ಪ್ರಭಾಕರ್