ಮಡಿಕೇರಿ, ಏ. 2: ಜಿಲ್ಲೆಯ ಜನರ ಅನುಕೂಲಕ್ಕಾಗಿ ಜಿಲ್ಲಾಡಳಿತ ವಾರದ ಮೂರು ದಿನ ಲಾಕ್‍ಡೌನ್ ಆದೇಶವನ್ನು ಸಡಿಲಿಸಿ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಿದೆ. ಆದರೆ ಈ ಕ್ರಮದಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬದಲು ಜನ ಜಂಗುಳಿ ಹೆಚ್ಚಾಗುತ್ತಿರುವುದರಿಂದ ಮತ್ತು ದುಬಾರಿ ದರ ಸೃಷ್ಟಿಯಾಗು ತ್ತಿರುವುದರಿಂದ ದಿನಸಿ ಸಾಮಗ್ರಿ ಗಳನ್ನು ಸಹಕಾರ ಸಂಘಗಳ ಮೂಲಕ ಮಾರಾಟಕ್ಕೆ ವ್ಯವಸ್ಥೆ ಮಾಡುವುದು ಸೂಕ್ತವೆಂದು ಕೊಡಗು ವಾಣಿಜ್ಯೋದ್ಯಮಿಗಳ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಎಂ. ಗಣೇಶ್ ಅಭಿಪ್ರಾಯಪಟ್ಟಿದ್ದಾರೆ

ಜಿಲ್ಲಾಡಳಿತ ಸೀಮಿತ ಸಮಯ ದಲ್ಲಿ ಲಾಕ್‍ಡೌನ್ ಆದೇಶವನ್ನು ಸಡಿಲಿಸಿದರೂ ಗ್ರಾಮೀಣ ಭಾಗದ ಜನರಿಗೆ ಇದರಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. ನಗರ ಮತ್ತು ಪಟ್ಟಣದ ಜನ ಮಾತ್ರ ತಮಗೆ ಬೇಕಾದ ವಸ್ತುಗಳನ್ನು ಕೊಳ್ಳುವಲ್ಲಿ ಯಶಸ್ವಿ ಯಾಗುತ್ತಿದ್ದಾರೆ. ತಾ. 1 ರಿಂದ ಬಿಪಿಎಲ್ ಕಾರ್ಡುದಾರರಿಗೆ ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ಕಿ ಸೇರಿದಂತೆ ಇತರ ಪಡಿತರವನ್ನು ಹಂಚಿಕೆ ಮಾಡಲು ಸರ್ಕಾರ ನಿರ್ಧರಿ ಸಿದೆ. ಆದರೆ ಎಪಿಎಲ್ ಕಾರ್ಡು ಹೊಂದಿರುವವರು ಕೂಡ ಹಸಿವಿನಿಂದ ಬಳಲುವ ಸ್ಥಿತಿ ಎದುರಾಗಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಎಪಿಎಲ್ ಕಾರ್ಡುದಾರರಿಗೂ ಬಿಪಿಎಲ್‍ಗೆ ನೀಡುವಷ್ಟೇ ಪ್ರಮಾಣದ ದಿನಸಿಯನ್ನು ನೀಡ ಬೇಕೆಂದು ಗಣೇಶ್ ಒತ್ತಾಯಿಸಿ ದ್ದಾರೆ. ಸಹಕಾರ ಸಂಘಗಳ ಮೂಲಕ ಸರ್ಕಾರವೇ ದಿನಸಿ ಸಾಮಗ್ರಿಗಳನ್ನು ಮಾರಾಟ ಮಾಡಿದರೆ ದರ ಏರಿಕೆಯ ಹಗಲು ದರೋಡೆಗೆ ಕಡಿವಾಣ ಬಿದ್ದಂತ್ತಾಗುತ್ತದೆ ಎಂದು ಹೇಳಿದ್ದಾರೆ.