ಗೋಣಿಕೊಪ್ಪಲು, ಏ. 2: ಶ್ರೀಮಂಗಲದ ಗ್ರಾ.ಪಂ. ವತಿಯಿಂದ ಅಲ್ಲಿನ ಕಾಕೂರು, ಕುರ್ಚಿ, ಬೀರುಗ ಕಾಲೋನಿ ಮತ್ತು ಶ್ರೀಮಂಗಲದ ವ್ಯಾಪ್ತಿಯ ಜನತೆಗೆ ಜಿಲ್ಲಾಧಿಕಾರಿಗಳು ನಿಗದಿಪಡಿಸಿದ ದರದಲ್ಲಿ ತರಕಾರಿಗಳನ್ನು ತಾ.1 ರಂದು ಗ್ರಾ.ಪಂ. ಅಧ್ಯಕ್ಷೆ ಚೋಕಿರ ಕಲ್ಪನಾ ನೇತೃತ್ವದಲ್ಲಿ ಮನೆ ಮನೆಗೆ ವಿತರಿಸಲಾಯಿತು.

ಜಿ.ಪಂ. ಉಪ ಕಾರ್ಯನಿರ್ವಹಣಾಧಿಕಾರಿ ಗುಡೂರು ಭೀಮಸೇನಾ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಷಣ್ಮುಗಂ ಸಮ್ಮುಖದಲ್ಲಿ ವಿವಿಧ ಕಾಲೋನಿಗೆ ತೆರಳಿ ತರಕಾರಿ ವಿತರಣೆ ಮಾಡಲಾಯಿತಲ್ಲದೆ, ಕೊಡಗು ಲಾಕ್‍ಡೌನ್ ನಂತರ ಎದುರಿಸಲಾದ ಸಮಸ್ಯೆಗಳನ್ನು ಗ್ರಾ.ಪಂ.ಪ್ರತಿನಿಧಿಗಳ ಸಮ್ಮುಖದಲ್ಲಿ ವಿಚಾರಿಸಲಾಯಿತು. ಗ್ರಾಮೀಣ ಭಾಗದಲ್ಲಿ ಸ್ವಚ್ಛತೆಗೆ ಒತ್ತು ನೀಡುವದು ಮತ್ತು ಕೊರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆ ವಹಿಸುವಂತೆ ಅಧ್ಯಕ್ಷೆ ಕಲ್ಪನಾ ಅವರು ಗ್ರಾಮಸ್ಥರಲ್ಲಿ ಮನವಿ ಮಾಡಿದರು. ಗ್ರಾ.ಪಂ.ಸದಸ್ಯ ಚಂದ್ರ ಪಿಡಿಓ ಸತೀಶ್ ಉಪಸ್ಥಿತರಿದ್ದರು.