ಸುಂಟಿಕೊಪ್ಪ, ಏ. 2: ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲವು ವಾರ್ಡ್‍ಗಳಲ್ಲಿನ ಚರಂಡಿಯಲ್ಲಿ ಮನೆಯ ಕಲುಷಿತ ನೀರು ಹರಿಯದೆ ಚರಂಡಿಯಲ್ಲೇ ಕಟ್ಟಿ ನಿಂತಿದ್ದು, ವಾತಾವರಣ ಗಬ್ಬೆದ್ದು ನಾರುತ್ತಿದೆ. ಕೊರೊನಾ ಸಾಂಕ್ರಾಮಿಕ ರೋಗ ಹರಡುತ್ತಿರುವ ಸಂದರ್ಭ ಗ್ರಾಮ ಪಂಚಾಯಿತಿ ಯವರು ಶುಚಿತ್ವಕ್ಕೆ ಆದ್ಯತೆ ನೀಡಬೇಕು.

ಆದರೆ ಸುಂಟಿಕೊಪ್ಪ ಆಡಳಿತ ಮಂಡಳಿ ಪಿಡಿಓ ಅವರು ಸ್ವಚ್ಛತೆಗೆ ಗಮನಹರಿಸುತ್ತಿಲ್ಲ. ಜನರ ಆರೋಗ್ಯ ದೃಷ್ಟಿಯಿಂದ ಸಾಂಕ್ರಾಮಿಕ ರೋಗ ಹರಡುವ ಮುನ್ನ ಚರಂಡಿ ಮೋರಿಗಳ ಶುಚಿತ್ವ ನಿರ್ವಹಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.