ಮಡಿಕೇರಿ, ಏ. 2: ಸೋಮವಾರಪೇಟೆ ತಾ.ಪಂ.ನಿಂದ ಕೊರೊನಾ ವೈರಸ್ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮಗಳನ್ನು ಈಗಾಗಲೇ ವಹಿಸಲಾಗುತ್ತಿದೆ. ಈ ಸಂಬಂಧ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ವೈರಸ್ ನಿಯಂತ್ರಕ ದ್ರಾವಣವನ್ನು ಸಿಂಪಡಿಸಲು ಕ್ರಮ ವಹಿಸುವಂತೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರು ನಿರ್ದೇಶನ ನೀಡಿರುವ ಮೇರೆಗೆ ‘ಸೋಡಿಯಂ ಹೈಡ್ರೋಕ್ಲೋರೈಡ್’ ಅಥವಾ ‘ಕ್ಲೋರಿನ್ ಸೊಲ್ಯುಷನ್’ ದ್ರಾವಣವನ್ನು 100 ಲೀಟರ್ ನೀರಿಗೆ 1 ಮಿಲಿಲೀಟರ್ನಂತೆ ಮಿಶ್ರಣ ಮಾಡಿ ಸ್ಪ್ರೇಯರ್ ಅಥವಾ ಟ್ರ್ಯಾಕ್ಟರ್ ಮುಖಾಂತರ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿಕೊಂಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಸಿಂಪಡಿಸುವಂತೆ ಸೋಮವಾರಪೇಟೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ತಾಲೂಕಿನ ಎಲ್ಲ ಗ್ರಾ.ಪಂ. ಅಧಿಕಾರಿಗಳಿಗೆ ಸೂಚಿಸಿದ್ದಾರೆ.