ವೀರಾಜಪೇಟೆ, ಏ. 2: ಕೊರೊನಾ ವೈರಾಣು ಸೋಂಕು ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಪ್ರಧಾನಮಂತ್ರಿ ನೀಡಿದ ಕರೆಯ ಅನ್ವಯ ಕೊಡಗು ಲಾಕ್‍ಡೌನ್ ಆಗಿದೆ. ಬಸ್‍ಗಳನ್ನು ನಂಬಿರುವ ಖಾಸಗಿ ಬಸ್‍ಗಳ ಕಾರ್ಮಿಕರು ಇಂದು ಅತಂತ್ರ ಪರಿಸ್ಥಿತಿಯಲ್ಲಿರುವ ಸಂದರ್ಭದಲ್ಲಿ ಜಿಲ್ಲಾಡಳಿತ ಮತ್ತು ಸರ್ಕಾರ ಪರಿಹಾರ ಒದಗಿಸುವಂತೆ ಕೊಡಗು ಜಿಲ್ಲಾ ಖಾಸಗಿ ಬಸ್ಸುಗಳ ಕಾರ್ಮಿಕ ಸಂಘದ ಅಧ್ಯಕ್ಷ ದಿನೇಶ್ ನಾಯರ್ ಒತ್ತಾಯ ಮಾಡಿದ್ದಾರೆ.
ನಾನಾ ಪ್ರದೇಶಗಳಲ್ಲಿ ಖಾಸಗಿ ಬಸ್‍ಗಳು ತನ್ನ ಸೇವೆಯನ್ನು ಒದಗಿಸುತ್ತದೆ. ಒಂದು ಬಸ್ ನಿರ್ವಹಣೆಗಾಗಿ 5 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಸ್‍ಗಳು ಸಂಚಾರವಾದರೆ ಮಾತ್ರ ಅಂದಿನ ದೈನಂದಿನ ಜೀವನ ಸಾಗುತ್ತದೆ.
ಹೀಗಿರುವ ಸಂದÀರ್ಭದಲ್ಲಿ ಕೊರೊನಾ ಮಾಹಾಮಾರಿಯಿಂದ ಇಂದು ಕಾರ್ಮಿಕರು ದುಡಿಯದೆ ಅಸಹಾಯಕರಾಗಿದ್ದಾರೆ. ಬಸ್‍ಗಳ ಅವಲಂಭಿತ ಕಾರ್ಮಿಕ ಕುಟುಂಬಗಳಿಗೆ ನೆರವು ಅಗತ್ಯವಾಗಿದೆ. ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಖಾಸಗಿ ಬಸ್ಸು ಕಾರ್ಮಿಕರ ಕುಟುಂಬಗಳಿಗೆ ದಿನಬಳಕೆ ಉಪಯೋಗವಾಗುವಂತೆ ಪರಿಹಾರ ಸಾಮಗ್ರಿಗಳನ್ನು ಒದಗಿಸಿಕೊಡುವಂತೆ ಹಾಗೂ ಕಾರ್ಮಿಕ ಇಲಾಖೆಯ ವತಿಯಿಂದ ಸೌಲಭ್ಯಗಳನ್ನು ಒದಗಿಸಿಕೊಡುವಂತೆ ಆಗ್ರಹಿಸಿದ್ದಾರೆ.
ಈ ಸಂದÀರ್ಭ ಸಂಘದ ಸದಸ್ಯರುಗಳಾದ ಮಂಜುನಾಥ ಟಿ.ಎನ್., ಜ್ಯೊಡಿ ವಾಜ್, ಸಂತೋಷ್ ರೈ ಮತ್ತು ರಂಜು ಹಾಜರಿದ್ದರು.
-ಕೆ.ಕೆ.ಎಸ್.