ವೀರಾಜಪೇಟೆ, ಏ. 2: ಕೊರೊನಾ ಮುಂಜಾಗ್ರತಾ ಕ್ರಮವಾಗಿ ಇಡೀ ದೇಶವೇ ಲಾಕ್ ಡೌನ್ ಆದ ಹಿನ್ನಲೆಯಲ್ಲಿ ಉತ್ತರ ಭಾರತದಿಂದ ಬಂದು ದಕ್ಷಿಣ ಕೊಡಗಿನಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದು ಲಾಕ್ ಡೌನ್ ಆದ ನಂತರ ದುಡಿಮೆ ಇಲ್ಲದೆ ಆಹಾರವಿಲ್ಲದೆ ನಿತ್ರಾಣವಸ್ಥೆಯಲ್ಲಿದ್ದ ಉತ್ತರ ಭಾರತದ ವಿವಿಧ ರಾಜ್ಯಗಳಿಂದ ವಲಸೆ ಬಂದಿದ್ದ 9 ಮಂದಿ ಕಾರ್ಮಿಕರಿಗೆ ಪೊನ್ನಂಪೇಟೆ ಯಲ್ಲಿ ಇಂದು ತಾಲೂಕು ತಹಶೀಲ್ದಾರ್ ಕೆ.ಎಸ್.ನಂದೀಶ್ ಅವರು 15ದಿನಗಳವರೆಗಿನ ಅಗತ್ಯದ ಪಡಿತರ ಕಿಟ್‍ನ್ನು ವಿತರಿಸಿದರು.
ಈ ಸಂದರ್ಭ ರೆವಿನ್ಯೂ ಅಧಿಕಾರಿಗಳು, ತಾಲೂಕು ಪಂಚಾಯಿತಿ ಅಧಿಕಾರಿಗಳು ಉಪಸ್ಥಿತರಿದ್ದರು. ತಾಲೂಕು ಪಂಚಾಯಿತಿ ಅಧಿಕಾರಿಗಳು ಈತನಕ ನಡೆಸಿದ ಅಂಕಿ ಅಂಶಗಳ ಪ್ರಕಾರ ತಾಲೂಕಿನಲ್ಲಿ ತೋಟ ಕಾರ್ಮಿಕರುಗಳು , ಕಟ್ಟಡ ಕಾರ್ಮಿಕರು ಹಾಗೂ ಇತರ ಕಾರ್ಮಿಕರು ಸೇರಿದಂತೆ ವಲಸೆ ಬಂದಿರುವ ಸುಮಾರು 3400 ಮಂದಿ ಕಾರ್ಮಿಕರಿದ್ದಾರೆ. ಪಡಿತರ ಕಾರ್ಡ್ ಇಲ್ಲದ ಕಾರ್ಮಿಕರುಗಳು ಇಲ್ಲಿನ ತಾಲೂಕು ಕಚೇರಿಯಲ್ಲಿ ಗುರುತಿನ ಚೀಟಿ ತೋರಿಸಿ ಪಡಿತರ ಸಾಮಾಗ್ರಿಗಳ ಕಿಟ್ ಪಡೆಯಬಹುದಾಗಿದೆ ಎಂದು ತಹಶೀಲ್ದಾರ್ ನಂದೀಶ್ ತಿಳಿಸಿದ್ದಾರೆ.
ಅಧಿಕಾರಿಗಳು, ತಾಲೂಕು ಪಂಚಾಯಿತಿ ಅಧಿಕಾರಿಗಳು ಉಪಸ್ಥಿತರಿದ್ದರು. ತಾಲೂಕು ಪಂಚಾಯಿತಿ ಅಧಿಕಾರಿಗಳು ಈತನಕ ನಡೆಸಿದ ಅಂಕಿ ಅಂಶಗಳ ಪ್ರಕಾರ ತಾಲೂಕಿನಲ್ಲಿ ತೋಟ ಕಾರ್ಮಿಕರುಗಳು , ಕಟ್ಟಡ ಕಾರ್ಮಿಕರು ಹಾಗೂ ಇತರ ಕಾರ್ಮಿಕರು ಸೇರಿದಂತೆ ವಲಸೆ ಬಂದಿರುವ ಸುಮಾರು 3400 ಮಂದಿ ಕಾರ್ಮಿಕರಿದ್ದಾರೆ. ಪಡಿತರ ಕಾರ್ಡ್ ಇಲ್ಲದ ಕಾರ್ಮಿಕರುಗಳು ಇಲ್ಲಿನ ತಾಲೂಕು ಕಚೇರಿಯಲ್ಲಿ ಗುರುತಿನ ಚೀಟಿ ತೋರಿಸಿ ಪಡಿತರ ಸಾಮಾಗ್ರಿಗಳ ಕಿಟ್ ಪಡೆಯಬಹುದಾಗಿದೆ ಎಂದು ತಹಶೀಲ್ದಾರ್ ನಂದೀಶ್ ತಿಳಿಸಿದ್ದಾರೆ.
ಕಾರ್ಮಿಕನಿಗೆ ಥರ್ಮಲ್ ಸ್ಕ್ರೀನ್ ಮಾಡಿಸಿ 78 ಮಂದಿಯ ಜೊತೆಯಲ್ಲಿ ಕ್ವಾರಂಟೈನ್‍ನಲ್ಲಿಡಲಾಗಿದೆ. ಇದರಿಂದ ಪೆರುಂಬಾಡಿಯ ಕ್ವಾರಂಟೈನ್ ಸಂಖ್ಯೆ 79ಕ್ಕೇರಿದೆ. ಈ ಕಾರ್ಮಿಕನನ್ನು ತನಿಖೆ ನಡೆಸಿದಾಗ ಹುಣಸೂರು ತಾಲೂಕಿನ ನಿವಾಸಿಯಾಗಿದ್ದು, ಕೆಲವು ತಿಂಗಳ ಹಿಂದೆ ಕಾರ್ಮಿಕನಾಗಿ ಕೇರಳಕ್ಕೆ ತೆರಳಿದ್ದನೆಂದೂ ನಂದೀಶ್ ತಿಳಿಸಿದರು.
ಔಷಧಿ ಸಿಂಪಡಿಕೆ : ಗೋಣಿಕೊಪ್ಪದಲ್ಲಿರುವ ಅಗ್ನಿಶಾಮಕ ದಳದ ತಂಡ ನಿನ್ನೆ ದಿನ ಸಂಜೆ ವೀರಾಜಪೇಟೆ ಪಟ್ಟಣದ ವ್ಯಾಪ್ತಿಯಲ್ಲಿ ಪಟ್ಟಣ ಪಂಚಾಯಿತಿ ನಿರ್ದೇಶನದಂತೆ ಆಯ್ದ ಸ್ಥಳಗಳಲ್ಲಿ ಅಗ್ನಿಶಾಮಕ ದಳದ ಟ್ಯಾಂಕರ್‍ನಲ್ಲಿಯೇ ಔಷಧಿಗಳನ್ನು ಸಿಂಪಡಿಸಿದರು.
ಲಾಕ್‍ಡೌನ್‍ನಿಂದ ವೀರಾಜಪೇಟೆ ಪಟ್ಟಣ ಬೆಳಗ್ಗಿನಿಂದಲೇ ಬಿಕೋ ಎನ್ನುತ್ತಿದ್ದರೂ ಬೆಳಗ್ಗಿನ 10 ಗಂಟೆಯ ನಂತರ ಕೆಲವು ನ್ಯಾಯ ಬೆಲೆಯ ಅಂಗಡಿಗಳು ತೆರೆದು ಸರಕಾರದ ಆದೇಶದಂತೆ ಪಡಿತರ ಗ್ರಾಹಕರುಗಳಿಗೆ ಎರಡು ತಿಂಗಳ ಪಡಿತರ ಸಾಮಗ್ರಿಗಳನ್ನು ವಿತರಿಸಿದರು.
ವೀರಾಜಪೇಟೆ ಪಟ್ಟಣದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಇದ್ದುದರಿಂದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ರಸ್ತೆ, ಮುಖ್ಯ ರಸ್ತೆಗಳಲ್ಲಿಯೂ ಯಾವುದೇ ಜನ ಸಂಚಾರದ ಸುಳಿವಿರಲಿಲ್ಲ.