ಶನಿವಾರಸಂತೆ, ಏ. 2: ಕೊರೊನಾ ವೈರಸ್ ವಿರುದ್ಧ ಪೊಲೀಸರು, ಆರೋಗ್ಯ ಇಲಾಖಾ ಸಿಬ್ಬಂದಿ, ಪೌರ ಕಾರ್ಮಿಕರು ಶ್ರಮಿಸುವಂತೆ ಪಟ್ಟಣದ ಗ್ಯಾಸ್ ವಿತರಕರು ಶ್ರಮಿಸುತ್ತಾ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಪಟ್ಟಣದ ಭಾರತ್ ಗ್ಯಾಸ್‍ನ ಪ್ರಜ್ಞಾ ಗ್ಯಾಸ್ ವಿತರಕರಾದ ಪರೀಕ್ಷಿತ್ ಹಾಗೂ ಮೋಹನ್ ತಮ್ಮ ಸಿಬ್ಬಂದಿ ಜೊತೆ ಪ್ರತಿ ಮನೆ ಬಾಗಿಲಿಗೆ ಗ್ಯಾಸ್ ವಿತರಿಸುತ್ತಿದ್ದಾರೆ. ಪ್ರತಿ ಸಿಲಿಂಡರ್‍ಗೂ ಸ್ಯಾನಿಟೈಜರ್ ಸಿಂಪಡಿಸುತ್ತಾ ಕೊರೊನಾ ವೈರಸ್ ಬಗ್ಗೆ ಮಾಹಿತಿ ನೀಡುತ್ತಾ ಮುನ್ನೆಚ್ಚರಿಕೆ ಕ್ರಮಗಳನ್ನು ತಿಳಿಸುತ್ತಾ ಜಾಗೃತಿ ಮೂಡಿಸುತ್ತಿದ್ದಾರೆ.