ಸುಂಟಿಕೊಪ್ಪ, ಏ. 2: ಜನವಿಕಾಸ ಜೀವನಧಾರಿ ಆಶ್ರಮಕ್ಕೆ ದಿನಸಿ ಹಾಗೂ ತರಕಾರಿಗಳನ್ನು ಗ್ರಾ.ಪಂ. ಪಿಡಿಓ ವೇಣುಗೋಪಾಲ್ ಹಾಗೂ ತರಕಾರಿ ವ್ಯಾಪಾರಸ್ಥರು ನೀಡಿದರು.

ಆಶ್ರಮದಲ್ಲಿ ವೃದ್ಧರು, ಅಂಗವಿಕಲರು, ಅನಾಥರು ಸೇರಿದಂತೆ 18 ಮಂದಿ ನೆಲೆಸಿದ್ದು; ಹೆಚ್.ಕೆ. ರಮೇಶ್ ಇವರ ಪೋಷಣೆಯನ್ನು ನಡೆಸುತ್ತಿದ್ದಾರೆ. ವೃದ್ಧಾಶ್ರಮದಲ್ಲಿ ಆಹಾರದ ಕೊರತೆ ಕಂಡು ಬಂದ ಹಿನ್ನೆಲೆ ಸುಂಟಿಕೊಪ್ಪ 2ನೇ ವಿಭಾಗದ ತರಕಾರಿ ವ್ಯಾಪಾರಿಗಳಾದ ರಹೆಮಾತ್, ಶೇರುಖಾನ್, ಮಜಿದ್, ಗ್ರಾ..ಪಂ.ಪಿಡಿಓ ವೇಣುಗೋಪಾಲ್ ದಿನಸಿ ಸಾಮಾಗ್ರಿ ಹಾಗೂ ಚಾಮುಂಡೇಶ್ವರಿ ಪ್ರಾವಿಜನ್ ಅನಿಲ್ ಸಿಹಿ ಪದಾರ್ಥಗಳನ್ನು ನೀಡಿದರು.

ಈ ಸಾಮಗ್ರಿಗಳನ್ನು ವೃದ್ಧಾಶ್ರಮಕ್ಕೆ ಎಎಸ್‍ಐ ಶಿವಪ್ಪ, ಗ್ರಾ.ಪಂ. ಪಿಡಿಓ ವೇಣುಗೋಪಾಲ್, ಸಿಬ್ಬಂದಿಗಳಾದ ಪುನೀತ್, ಬಾಲು ಮತ್ತಿತರರು ನೀಡಿದರು