ಮಡಿಕೇರಿ, ಏ. 1: ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಗೆ ವಾಹನದ ಮೂಲಕ ಅಗತ್ಯ ಸಾಮಗ್ರಿಗಳನ್ನು ಪಂಚಾಯತ್ ಹಾಗೂ ಸ್ಥಳೀಯ ವರ್ತಕರ ನೆರವಿನಿಂದ ಪೂರೈಸಲಾಗುತ್ತಿದೆ.
ಜಿಲ್ಲೆಯಲ್ಲಿನ ಕೆಲವು ದೂರದಲ್ಲಿನ ಗ್ರಾಮಗಳ ಜನರಿಗೆ ಉಪಯೋಗವಾಗುವ ಹಾಗೆ, ಹಾಗೂ ದಿನನಿತ್ಯದ ಸಾಮಗ್ರಿಗಳಿಗೆ ಪಟ್ಟಣಕ್ಕೆ ದೂರದಿಂದ ಬರುವುದು ಹಾಗೂ ಜನಸಂದಣಿಯನ್ನು ನಿಯಂತ್ರಿಸುವ ಸಲುವಾಗಿ ಜನರಿದ್ದೆಡೆಗೆ ಅಗತ್ಯ ಸಾಮಗ್ರಿಗಳನ್ನು ಸುಲಭ ದರದಲ್ಲಿ ಜನರಿಗೆ ಪೂರೈಕೆ ಮಾಡಲಾಗುತ್ತಿದೆ.