ಗೋಣಿಕೊಪ್ಪಲು, ಮಾ. 31: ಕಳೆದ ಒಂದು ತಿಂಗಳ ಹಿಂದೆ ಕಾಡಾನೆ ದಾಳಿಗೆ ಸಿಲುಕಿ ಪ್ರಾಣಾಪಾಯದಿಂದ ಪಾರಾಗಿ ಚಿಕಿತ್ಸೆ ಪಡೆಯುತ್ತಿದ್ದ ಯರವರ ಚಾತ ಎಂಬ ಕಾರ್ಮಿಕನಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು ರೈತ ಮುಖಂಡರ ಸಮ್ಮುಖದಲ್ಲಿ ಚಿಕಿತ್ಸಾ ವೆಚ್ಚದ ಪರಿಹಾರ ಹಣವನ್ನು ವಿತರಿಸಿದರು. ಗೋಣಿಕೊಪ್ಪಲು, ಮಾ. 31: ಕಳೆದ ಒಂದು ತಿಂಗಳ ಹಿಂದೆ ಕಾಡಾನೆ ದಾಳಿಗೆ ಸಿಲುಕಿ ಪ್ರಾಣಾಪಾಯದಿಂದ ಪಾರಾಗಿ ಚಿಕಿತ್ಸೆ ಪಡೆಯುತ್ತಿದ್ದ ಯರವರ ಚಾತ ಎಂಬ ಕಾರ್ಮಿಕನಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು ರೈತ ಮುಖಂಡರ ಸಮ್ಮುಖದಲ್ಲಿ ಚಿಕಿತ್ಸಾ ವೆಚ್ಚದ ಪರಿಹಾರ ಹಣವನ್ನು ವಿತರಿಸಿದರು. ಪದಾಧಿಕಾರಿಗಳ ಸಮ್ಮುಖದಲ್ಲಿ ನೀಡಿದ್ದಾರೆ. ಉಳಿಕೆ 5 ಸಾವಿರ ಹಣ ವನ್ನು 10 ದಿನದಲ್ಲಿ ನೀಡಲಾಗುತ್ತದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದರು. ಈ ಸಂದರ್ಭ ರೈತ ಸಂಘದ ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ, ಅಮ್ಮತ್ತಿ ಹೋಬಳಿಯ ಅಧ್ಯಕ್ಷ ಮಂಡೇಪಂಡ ಪ್ರವೀಣ್, ಸಿದ್ದಾಪುರ, ಕರಡಿಗೋಡು ವ್ಯಾಪ್ತಿಯ ರೈತ ಮುಖಂಡರಾದ ಕುಕ್ಕನೂರು ರಂಜನ್, ಚಂದ್ರಶೇಖರ್, ತಿತಿಮತಿ ಅರಣ್ಯ ಇಲಾಖೆಯ ಡಿ.ಆರ್.ಎಫ್. ಒ.ನ ಉಮಾಶಂಕರ್, ಶ್ರೀನಿವಾಸ್ ಹಾಗೂ ತೋಟದ ಮಾಲೀಕ ಮಂಡೇಪಂಡ ಸಿ. ಮುತ್ತಣ್ಣ ಮುಂತಾದವರು ಹಾಜರಿದ್ದರು.