ಶನಿವಾರಸಂತೆ, ಏ. 1: ಕೊರೊನಾ ಭೀತಿ, ಭಾರತ ಲಾಕ್‍ಡೌನ್ ಹಾಗೂ 144 ಸೆಕ್ಷನ್ ನಡುವೆ ಪಟ್ಟಣದ ಜನತೆ ಯುಗಾಗಿ ಹಬ್ಬವನ್ನು ಸರಳವಾಗಿ ಆಚರಿಸಿದರು. ಕೊರೊನಾ ವೈರಸ್ ಭೀತಿಯಿಂದ ದೇವಾಲಯಗಳಿಗೆ ಹೋಗುವಂತಿಲ್ಲ. ಹಾಗಾಗಿ ಪಟ್ಟಣದ ಶ್ರೀಗಣಪತಿ ಪಾರ್ವತಿ ಚಂದ್ರಮೌಳೇಶ್ವರ, ವಿಜಯವಿನಾಯಕ ದೇವಾಲಯ, ಶ್ರೀರಾಮಮಂದಿರದಲ್ಲಿ ಭಕ್ತರ ಕೊರತೆಯ ನಡುವೆ ಅರ್ಚಕರು ದೇವರಿಗೆ ವಿಶೇಷ ಅಲಂಕಾರ ಮಾಡಿ, ಪೂಜಿಸಿದರು.