ಸುಂಟಿಕೊಪ್ಪ, ಮಾ. 28: ರಾಷ್ಟ್ರೀಯ ಹೆದ್ದಾರಿಯ ಶಾಂತಗೇರಿ ತಿರುವಿನಲ್ಲಿ ತೈಲ ತುಂಬಿದ ಲಾರಿಯೊಂದು ರಸ್ತೆ ಬದಿಗೆ ಮಗುಚಿಕೊಂಡ ಘಟನೆ ಸಂಭವಿಸಿದೆ. ಶ್ರೀರಂಗಪಟ್ಟಣದಿಂದ ಮಡಿಕೇರಿ ಕಡೆಗೆ ತೆರಳುತ್ತಿದ್ದ ಖಾದ್ಯ ತೈಲ ಲಾರಿಯೊಂದು ಚಾಲಕನ ನಿಯಂತ್ರಣಕ್ಕೆ ಬಾರದೆ ಶಾಂತಗೇರಿ ತಿರುವಿನಲ್ಲಿ ರಸ್ತೆಯ ದಿಬ್ಬಕ್ಕೆ ಮಗುಚಿಕೊಂಡಿದೆ. ಚಾಲಕ ಪ್ರಸನ್ನ ಪ್ರಾಣಾಪಾಯದಿಂದ ಪಾರಾಗಿದ್ದಾರೆ.