ಮಡಿಕೇರಿ, ಮಾ. 28: ವೈದ್ಯಕೀಯ, ಪತ್ರಿಕಾರಂಗ, ಪೊಲೀಸ್ ಹಾಗೂ ಇನ್ನಿತರ ಕ್ಷೇತ್ರಗಳೊಂದಿಗೆ ಬ್ಯಾಂಕಿಂಗ್ ವ್ಯವಸ್ಥೆಯೂ ಅವಶ್ಯಕ ಸೇವೆಗಳಲ್ಲೊಂದಾಗಿದ್ದು, ರಾಜ್ಯಮಟ್ಟದ ಬ್ಯಾಂಕ್‍ಗಳ ಸಮಿತಿಯು ಸಭೆ ಸೇರಿ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಬ್ಯಾಂಕುಗಳ ವಲಯ/ಕ್ಷೇತ್ರೀಯ ಕಾರ್ಯಾಲಯಗಳಿಗೆ ಪರಿಪತ್ರ ಸಂಖ್ಯೆ 104/Sಐಃಅ/2944/1 ತಾ 26ರ ನಿರ್ದೇಶನದಂತೆ ಜಾರಿಗೊಳಿಸಲಾದ ಬ್ಯಾಂಕುಗಳ ಸಮಯ ಈ ರೀತಿ ಇದೆ.ಬ್ಯಾಂಕಿಂಗ್ ವ್ಯವಹಾರದ ಸಮಯ ವಾರದ ಎಲ್ಲಾ ದಿನಗಳಲ್ಲಿ (ಭಾನುವಾರ, 2ನೇ ಶನಿವಾರ ಹಾಗೂ ಸರಕಾರಿ ರಜಾ ದಿನಗಳನ್ನು ಹೊರತು ಪಡಿಸಿ) ಬೆಳಿಗ್ಗೆ 10 ರಿಂದ ಮಧ್ಯಾಹ್ನ 2ರ ವರೆಗೆ.ಜಿಲ್ಲಾ (ಮಡಿಕೇರಿ) ಮತ್ತು ತಾಲೂಕು ಕೇಂದ್ರ ಸ್ಥಾನಗಳಾದ (ಸೋಮವಾರಪೇಟೆ, ವೀರಾಜಪೇಟೆ) ಮತ್ತು ಅರೆ ನಗರ ಪ್ರದೇಶ (ಕುಶಾಲನಗರ)ದಲ್ಲಿ ವ್ಯವಹರಿಸುತ್ತಿ ರುವ ಶಾಖೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತವೆ.

ಬ್ಯಾಂಕುಗಳ ಗ್ರಾಮೀಣ ಭಾಗದ ಆಯ್ದ ಕೆಲವು ಶಾಖೆಗಳು (ಕೆಳ ಸೂಚಿಸಿದಂತೆ) ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಎಂದಿನಂತೆ ಕಾರ್ಯನಿರ್ವಹಿ ಸುತ್ತವೆ. (ಬ್ಯಾಂಕ್ ಆಫ್ ಬರೋಡ - ಸಿದ್ದಾಪುರ, ನಗರೂರು, ಗದ್ದೆಹಳ್ಳ, ಗೋಣಿಕೊಪ್ಪಲು. ಕಾರ್ಪೊರೇಶನ್ ಬ್ಯಾಂಕ್ - ಸೋಮವಾರಪೇಟೆ, ಗೋಣಿಕೊಪ್ಪಲು, ಕೂಡುಮಗಳೂರು, ಕೆನರಾ ಬ್ಯಾಂಕ್ - ಪೊನ್ನಂಪೇಟೆ, ಗುಡುಗಳಲೆ, ಗೋಣಿಕೊಪ್ಪಲು, ಸೋಮವಾರಪೇಟೆ, ಕೊಡ್ಲಿಪೇಟೆ, ನಾಪೋಕ್ಲು)

ಇನ್ನುಳಿದ ಎಲ್ಲಾ ಬ್ಯಾಂಕುಗಳ ಗ್ರಾಮೀಣ ಭಾಗದ ಶಾಖೆಗಳು ಈ ಕೆಳಕಂಡ ದಿನಗಳಲ್ಲಿ ಕಾರ್ಯನಿರ್ವಹಿಸುತ್ತವೆ. ಮಾ. 30, 31, ಏಪ್ರಿಲ್ 2, 4, 7, 9 ಮತ್ತು 13) ಇದೀಗ ವಾರದ 3 ದಿನಗಳಾದ ಸೋಮವಾರ, ಬುಧವಾರ ಹಾಗೂ ಶುಕ್ರವಾರ ಮಾತ್ರ ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಕಫ್ರ್ಯೂಗೆ ಸಡಿಲಿಕೆ ಇರುತ್ತದೆ.