ಮಡಿಕೇರಿ, ಮಾ. 28: ರಾಜ್ಯದಲ್ಲಿ ಕೋವಿಡ್-19 ರೋಗವು ಪಸರಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿರುವ (ಬೆಂಗಳೂರು ನಗರ ಹೊರತುಪಡಿಸಿ) ಎಲ್ಲಾ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕು ಸಾರ್ವಜನಿಕ ಆಸ್ಪತ್ರೆ ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಎಲ್ಲಾ ಜ್ವರ ಪ್ರಕರಣಗಳನ್ನು ತಪಾಸಣೆ ನಡೆಸಿ, ಶೀಘ್ರ ಪತ್ತೆ, ರೆಫರಲ್ ಸೇವೆ ಹಾಗೂ ಸೂಕ್ತ ಚಿಕಿತ್ಸೆ ನೀಡುವ ಅವಶ್ಯಕತೆ ಇರುತ್ತದೆ.
ಕೋವಿಡ್-19 ರೋಗವು ಬಹುಮುಖವಾಗಿ ಜ್ವರ, ಕೆಮ್ಮು, ಉಸಿರಾಟದ ತೊಂದರೆ, ಅತಿಸಾರ ಬೇದಿ ಮುಖಾಂತರ ಕಾಣಿಸಿಕೊಳ್ಳುತ್ತಿದ್ದು, ಇದರಲ್ಲಿ ಹೆಚ್ಚಾಗಿ ಜ್ವರ ಪ್ರಕರಣಗಳು ದಾಖಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಜ್ವರ ಪ್ರಕರಣಗಳನ್ನು ಶೀಘ್ರ ಪತ್ತೆ ಹಚ್ಚುವ ಅವಶ್ಯಕತೆ ಇರುತ್ತದೆ. ಈ ನಿಟ್ಟಿನಲ್ಲಿ ರಾಜ್ಯ ಎಲ್ಲಾ ತಾಲೂಕು ಸಾರ್ವಜನಿಕ ಆಸ್ಪತ್ರೆ ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ತಾ. 26ರಿಂದ ತಪಾಸಣಾ ಶಿಬಿರಗಳನ್ನು ಏರ್ಪಡಿಸಲು ಹಾಗೂ ಆರೋಗ್ಯ ಸಂಸ್ಥೆಗಳಗೆ ಬರುವ ರೋಗಿಗಳನ್ನು ತಪಾಸಣೆಗೆ ಒಳಪಡಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬೆಂಗಳೂರು ಆದೇಶಿಸಿದೆ.
ಇದರ ಅನ್ವಯ * ವಾರದ ಎಲ್ಲಾ ದಿನಗಳು (ಸರ್ಕಾರಿ ರಜೆಗಳನ್ನು ಒಳಗೊಂಡಂತೆ) ಜ್ವರ ತಪಾಸಣಾ ಶಿಬಿರಗಳನ್ನು ನಡೆಸುವುದು.
* ಆರೋಗ್ಯ ಸಂಸ್ಥೆಯ ಹೊರಾಂಗಣದಲ್ಲಿ / ತೆರೆದ ಸ್ಥಳದಲ್ಲಿ / ಪ್ರತ್ಯೇಕ ಕೊಠಡಿಯಲ್ಲಿ ಜ್ವರ ತಪಾಸಣಾ ಶಿಬಿರಗಳನ್ನು ನಡೆಸುವುದು.
* ಜ್ವರ ತಪಾಸಣಾ ಶಿಬಿರಗಳನ್ನು ನಡೆಸಲು ಅವಶ್ಯ ಆರೋಗ್ಯ ಸಲಕರಣೆಗಳು, ಸುರಕ್ಷಾ ಕವಚಗಳು, ಇತರೆ ಜ್ವರ ತಪಾಸಣಾ ಶಿಬಿರಗಳಲ್ಲಿ ಲಭ್ಯವಿರತಕ್ಕದ್ದು.
* ಜ್ವರ ತಪಾಸಣಾ ಶಿಬಿರಗಳಿಗೆ ವೈದ್ಯಾಧಿಕಾರಿಗಳು ಹಾಗೂ ಶುಶ್ರೂಷಕಿ, ಹಿರಿಯ, ಕಿರಿಯ ಮಹಿಳಾ, ಪುರುಷ ಆರೋಗ್ಯ ಸಹಾಕರುಗಳನ್ನು ಒಳಗೊಂಡಂತೆ ತಂಡ ರಚಿಸಿಕೊಳ್ಳತಕ್ಕದ್ದು.
* ಒಳ ಬರುವ ರೋಗಿಗಳು ಹಾಗೂ ಆರೋಗ್ಯ ಸಿಬ್ಬಂದಿಗಳಲ್ಲಿ ಕನಿಷ್ಟ 1 ಮೀಟರ್ ಅಂತರ ಇರುವುದನ್ನು ಖಚಿತಪಡಿಸುವುದು.
* ಜ್ವರ ಪ್ರಕರಣಗಳನ್ನು ತಪಾಸಣೆ ನಡೆಸಿ ಕೋವಿಡ್-19 ರೋಗ ಲಕ್ಷಣಗಳು ಕಂಡು ಬಂದಲ್ಲಿ ಸುರಕ್ಷಾ ಕ್ರಮಗಳನ್ನು ವಹಿಸಿ ಮೇಲ್ದರ್ಜೆಯ ಆಸ್ಪತ್ರೆಗೆ ಸೂಕ್ತ ರೆಫರಲ್ ಮಾಡಿ ಸಂಬಂಧಪಟ್ಟ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡುವುದು.
* ರೋಗಿಯು ಉಪಯೋಗಿಸಿದ ಮಾಸ್ಕ್, ಗ್ಲೌಸ್ಗಳನ್ನು ಎಚ್ಚರಿಕೆಯಿಂದ ಬಯೋಮೆಡಿಕಲ್ ತ್ಯಾಜ್ಯ ನಿರ್ವಹಣೆ ಕಾಯ್ದೆ ಅನ್ವಯ ವಿಲೇವಾರಿ ಮಾಡುವುದು.
* ಜ್ವರ ತಪಾಸಣಾ ವರದಿಗಳನ್ನು ಕ್ರೋಢೀಕರಿಸಿ ತಾಲೂಕು ಆರೋಗ್ಯಾಧಿಕಾರಿಗಳ ಮುಖಾಂತರ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳಿಗೆ ಪ್ರತಿದಿನ ಸಂಜೆ 5 ಗಂಟೆಗೆ ಸಲ್ಲಿಸುವುದು.
* ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ಪ್ರತಿದಿನ ಸಂಜೆ 7 ಗಂಟೆಯ ಒಳಗೆ ಕ್ರೋಢಿಕರಿಸಿದ ವರದಿಯನ್ನು ನಿರ್ದೇಶನಾಲಯದ ಇ-ಮೇಲ್ ssuiಜsಠಿbಚಿಟಿgಚಿboಡಿe@gmಚಿi.ಛಿomಗೆ ಸಲ್ಲಿಸುವುದು.
* ಜ್ವರ ತಪಾಸಣಾ ಶಿಬಿರಕ್ಕೆ ಅವಶ್ಯ ಸಾಮಗ್ರಿಗಳನ್ನು ಸಂಬಂಧಪಟ್ಟ ಆರೋಗ್ಯ ಸಂಸ್ಥೆಯ ಮುಕ್ತ ನಿಧಿಯ ಅನುದಾನದಲ್ಲಿ ಭರಿಸತಕ್ಕದ್ದು.