ಮಡಿಕೇರಿ, ಮಾ. 26: ಮೈಕ್ರೋ ಫೈನಾನ್ಸ್ ಮೂಲಕ ಬಡವರ್ಗಕ್ಕೆ ನೀಡಿರುವ ಸಾಲವನ್ನು ಈಗಿನ ಪರಿಸ್ಥಿತಿಯಲ್ಲಿ ಬಲವಂತದಿಂದ ವಸೂಲಿ ಮಾಡದಂತೆ ಮಡಿಕೇರಿ ತಹಶೀಲ್ದಾರ್ ಪಿ. ಮಹೇಶ್ ಸಲಹೆ ನೀಡಿದ್ದಾರೆ. ಕೊಡಗು ಜಿಲ್ಲಾಧಿಕಾರಿಗಳು ಈ ಬಗ್ಗೆ ನಿರ್ದೇಶಿಸಿದ್ದು, ಕೊರೊನಾ ಭೀತಿಯಲ್ಲಿ ದುಡಿಮೆಯಿಲ್ಲದೆ ದಿನ ಕಳೆಯುತ್ತಿರುವ ಜನತೆಗೆ ಸಾಲ ಮರುಪಾವತಿಗೆ ಒತ್ತಾಯಿಸದಂತೆ ತಿಳಿಹೇಳಿರುವ ಅವರು; ಸಂಬಂಧಪಟ್ಟವರಿಗೆ ಕಾಲಾವಕಾಶ ನೀಡುವಂತೆ ಸೂಚಿಸಿದ್ದಾರೆ.
ಜಿಲ್ಲಾಡಳಿತದ ಆದೇಶ ಉಲ್ಲಂಘಿಸಿ ದೂರುಗಳು ಬಂದರೆ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅವರು ಸುಳಿವು ನೀಡಿದ್ದಾರೆ.