ಮಡಿಕೇರಿ, ಮಾ. 26: ಮಡಿಕೇರಿ ಸಮೀಪದ ಮಕ್ಕಂದೂರು ಬಳಿ ಕರ್ಣಂಗೇರಿ ನಿವಾಸಿ ಹೆಚ್.ಕೆ. ರಾಜು ಹಾಗೂ ಗೌರಿ ದಂಪತಿಯ ಪುತ್ರ ರಜಿತ್, ಕಾಸರಗೋಡು ಬಳಿ ದೇಲಂಪಾಡಿ ಗ್ರಾಮದ ಮಾಂಕು ಮತ್ತು ದೇವಕಿ ಎಂಬವರ ಪುತ್ರಿ ಅನುಷ ಜೋಡಿಯ ಮದುವೆ ಏಳು ಮಂದಿಗೆ ಸೀಮಿತಗೊಂಡಿತು.

ಇಂದು ಸುಳ್ಯದ ಕೆವಿಜಿ ಪುರಭವನದಲ್ಲಿ ನಡೆಯುವಂತೆ ನಿಶ್ಚಯಿಸಿದ್ದ ಈ ವಿವಾಹವನ್ನು ಕೊರೊನಾ ಸೋಂಕಿನ ಕಾರಣ, ಸ್ಥಳ ಬದಲಾಯಿಸಿ, ಕರ್ಣಂಗೇರಿಯ ಶ್ರೀ ರಾಜರಾಜೇಶ್ವರಿ ದೇವಾಲಯದಲ್ಲಿ ವಧುವರ ಸಹಿತ ಏಳು ಮಂದಿಗೆ ಸೀಮಿತವಾಗಿ ನೆರವೇರಿಸಲಾಯಿತು.