ಮಡಿಕೇರಿ, ಮಾ. 26: ಸದ್ಯದ ಪರಿಸ್ಥಿತಿಯ ದುರ್ಲಾಭ ಪಡೆದು ಜನಸಾಮಾನ್ಯ ರಿಗೆ ಬೇಕಾದ ತರಕಾರಿ, ದಿನಸಿ, ಮತ್ತಿತರ ಅಗತ್ಯ ವಸ್ತುಗಳನ್ನು ಅಧಿಕ ದರಕ್ಕೆ ಮಾರುತ್ತಿರುವ ಬಗ್ಗೆ ದೂರುಗಳು ಬರುತ್ತಿದ್ದು, ಅಂತಹ ವರ್ತಕರಿಗೆ ದಂಡ ವಿಧಿಸುವುದರೊಂದಿಗೆ, ಅಂಗಡಿಯ ಪರವಾನಗಿ ರದ್ದುಗೊಳಿಸಲಾಗುವುದೆಂದು ಸೋಮವಾರಪೇಟೆ ತಹಶೀಲ್ದಾರ್ ಗೋವಿಂದರಾಜು ಎಚ್ಚರಿಸಿದ್ದಾರೆ.