*ಗೋಣಿಕೊಪ್ಪ, ಮಾ. 24: ಪೆÇಲೀಸರ ಬಿಗಿ ಭದ್ರತೆ ನಡುವೆಯೂ ಯಾವುದೇ ಆತಂಕವಿಲ್ಲದೆ ದ್ವಿಚಕ್ರ ಮತ್ತು 4 ಚಕ್ರ ವಾಹನಗಳ ಓಡಾಟ ಗೋಣಿಕೊಪ್ಪ, ಪೆÇನ್ನಂಪೇಟೆ, ಪಾಲಿಬೆಟ್ಟ ತಿತಿಮತಿ, ಅಮ್ಮತ್ತಿ, ಹುದಿಕೇರಿ, ಶ್ರೀಮಂಗಲ, ಕುಟ್ಟ, ಕಾನೂರು ಭಾಗಗಳಲ್ಲಿ ಕಂಡು ಬಂದಿತು.
ಕೊರೊನಾ ವೈರಸ್ನಿಂದ ಬಾಧಿತದಿಂದ ಉಂಟಾಗುವ ಸಂಕಷ್ಟದಿಂದ ಪಾರಾಗುವ ಕ್ರಮಕ್ಕೆ ಸರ್ಕಾರ ಮುಂದಾಗಿದ್ದರೂ, ರಸ್ತೆಗೆ ಬಾರದಂತೆ ಪೊಲೀಸರು ಮನವರಿಕೆ ಮಾಡುತ್ತಿದ್ದರೂ ಸಾರ್ವಜನಿಕರಿಂದ ಸ್ಪಂದನೆ ಸಿಗಲಿಲ್ಲ.
ಸರ್ಕಾರ ಪತ್ರಿಕೆ ವಿತರಿಸಲು ಯಾವುದೇ ನಿಬರ್ಂಧ ಮಾಡದಿದ್ದರೂ, ಪೆÇಲೀಸರು ಪತ್ರಿಕೆ ವಿತರಿಸಲು ಅವಕಾಶ ನೀಡಲಿಲ್ಲ. ಹಾಲಿನ ಡೈರಿ ತೆರೆಯಲು ಸಹ ಬಿಡಲಿಲ್ಲ. ವಾಹನ ಸವಾರರನ್ನು ಬಸ್ ನಿಲ್ದಾಣದಲ್ಲಿ ತಡೆಯುವ ಬದಲು ಪಟ್ಟಣಕ್ಕೆ ಸಂಚಾರ ಬೆಸೆಯುವ ಮಾರ್ಗಗಳಲ್ಲಿ ಬಿಗಿ ಭದ್ರತೆ ಕೈಗೊಂಡಿದ್ದರೆ; ಪಟ್ಟಣಕ್ಕೆ ವಿನಾಕಾರಣ ಆಗಮಿಸುವ ವಾಹನಗಳಿಗೆ ನಿಯಂತ್ರಣ ಹೇರಬಹುದಿತ್ತು ಎಂಬದು ನಾಗರಿಕರ ಅಭಿಪ್ರಾಯವಾಗಿತ್ತು.
ಕೋವಿಡ್ 19 ವೈರಸ್ ಸೋಂಕು ತಡೆಗಟ್ಟಲು ತಾಲೂಕು ಆರೋಗ್ಯ ಇಲಾಖೆ ವತಿಯಿಂದ ಬಹಳಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಮತ್ತು ಶುಶ್ರೂಷಕಿಯರು, ಸಿಬ್ಬಂದಿಗಳು ಹೆಚ್ಚಿನ ಭದ್ರತೆ ಯೊಂದಿಗೆ ಕರ್ತವ್ಯ ನಿರ್ವಹಿಸಲು ಅನುಕೂಲ ಕಲ್ಪಿಸಲಾಗಿದೆ. ಜನತೆ ಯಾವುದೇ ಆತಂಕಕ್ಕೆ ಒಳಗಾಗದೆ ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಮುಂದಾ ಗಬೇಕು ಎಂದು ವೀರಾಜಪೇಟೆ ತಾಲೂಕು ವೈದ್ಯಾಧಿಕಾರಿ ಡಾ. ಯತಿರಾಜ್ ಮಾಹಿತಿ ನೀಡಿದ್ದಾರೆ.
ತರಕಾರಿ ವ್ಯಾಪಾರಗಳು ಸ್ಥಗಿತಗೊಂಡ ಹಿನ್ನೆಲೆ ತರಕಾರಿ ಬೆಲೆ ಗಗನಕ್ಕೇರಿದೆ. 20 ರೂಪಾಯಿ ಇದ್ದ ಟೊಮೇಟೊ 50 ರೂಪಾಯಿಗೆ ಏರಿಕೆ ಕಂಡಿದೆ. ಉಳಿದಂತೆ ಇತರ ತರಕಾರಿಗಳ ಬೆಲೆಯೂ ಹೆಚ್ಚಳವಾಗಿದೆ. ಬೆಲೆ ಹೆಚ್ಚಾಗಿದ್ದರೂ ಯಾವುದೇ ಚಿಂತೆಯಿಲ್ಲದೆ ತರಕಾರಿ ಮತ್ತು ಇತರ ವಸ್ತುಗಳ ಖರೀದಿಗೆ ಗ್ರಾಹಕರು ಮುಗಿಬಿದ್ದರು. ನಿಯಮದಂತೆ 12 ರಿಂದ 2 ಗಂಟೆವರೆಗೆ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಿದ ಹಿನ್ನೆಲೆ ಹೆಚ್ಚಿನ ಗ್ರಾಹಕರು ಅಂಗಡಿಗಳಲ್ಲಿ ಗುಂಪು ಗುಂಪಾಗಿ ಸೇರಿ ವಸ್ತುಗಳ ಖರೀದಿಗೆ ಮುಂದಾದರು. ದಿನಸಿ ಮತ್ತು ತರಕಾರಿ ವಸ್ತುಗಳಲ್ಲದೆ ಇತರ ವಸ್ತುಗಳ ಅಂಗಡಿಗಳನ್ನು ತೆಗೆದು ವ್ಯಾಪಾರ ನಡೆಸಲು ಮುಂದಾದಾಗ ಅಂತಹ ಅಂಗಡಿಗಳನ್ನು ಪೆÇಲೀಸರು ಮುಚ್ಚಿಸಿದರು. -ಎನ್.ಎನ್. ದಿನೇಶ್