ಮಡಿಕೇರಿ, ಮಾ. 24: ಕೊರೊನಾ ಸಮಸ್ಯೆ ಮುಂದೆ ಬಿಗಡಾಯಿ ಸಲಿದ್ದು, ಅದನ್ನು ಎದುರಿಸಲು ಜಿಲ್ಲಾ ಆಡಳಿತದೊಂದಿಗೆ ಹೋಂ ಸ್ಟೇಗಳೂ ಕೈಜೋಡಿಸ ಬೇಕಿದೆ ಎಂದು ಹೋಂ ಸ್ಟೇ ಅಸೋಸಿಯೇಷನ್ ಅಧ್ಯಕ್ಷ ಬಿ.ಜಿ. ಅನಂತ ಶಯನ ಮನವಿ ಮಾಡಿದ್ದಾರೆ.

ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ಪ್ರಕಾರ ಪ್ರತಿ ಹೋಬಳಿ ಗ್ರಾಮ, ನಗರಗಳಲ್ಲಿ ಸೋಂಕು ಪೀಡಿತರನ್ನು ಇರಿಸಿಕೊಳ್ಳಬೇಕಾಗುವ ಅನಿವಾರ್ಯತೆ ಬಂದರೆ ಸಾಕಷ್ಟು ಕೊಠಡಿಗಳ ಅವಶ್ಯಕತೆ ಇದೆ. ಹಾಗಾಗಿ ಜಿಲ್ಲೆಯಾದ್ಯಂತ ಇರುವ-ಮನೆಯಿಂದ ಪ್ರತ್ಯೇಕ ಇರುವ ಎಲ್ಲಾ ಹೋಂ ಸ್ಟೇಗಳು, ವಸತಿ ಸೌಲಭ್ಯ ಒದಗಿಸಲು ಮುಂದಾಗಬೇಕು ಎಂದು ಅವರು ಮನವಿ ಮಾಡಿದ್ದಾರೆ. ನೋಂದಣಿಗೆ ಅರ್ಜಿ ಸಲ್ಲಿಸಿರುವ ಇತರರೂ ಮುಂದಾಗುವಂತೆ ಕೋರಿದ್ದಾರೆ.

ಕ್ಲಬ್ ಮಹೀಂದ್ರ ಮಡಿಕೇರಿ ಮತ್ತು ವೀರಾಜಪೇಟೆಯ ರೆಸಾರ್ಟ್ ಬಿಟ್ಟು ಕೊಡುತ್ತಿದ್ದು, ಹೊಟೇಲ್ ಮಾಲೀಕರ ಸಂಘವೂ ಕೋಣೆಗಳನ್ನು ಬಿಟ್ಟು ಕೊಡಲು ಮುಂದಾಗಿದೆ.

ಅವಶ್ಯ ಬಂದಲ್ಲಿ ಕೋಣೆಗಳನ್ನು ಕಾನೂನು ಬದ್ಧವಾಗಿ ಪಡೆದುಕೊಳ್ಳುವ ಅವಕಾಶವೂ ಸರಕಾರಕ್ಕಿದೆ.