ಮಡಿಕೇರಿ, ಮಾ. 24: ಕೊಡಗು ಲಾಕ್ಡೌನ್ಗೆ ಸಂಬಂಧಿಸಿದಂತೆ ಈ ಕೆಳಕಂಡಂತೆ ತಿದ್ದುಪಡಿ ಆದೇಶವನ್ನು ಜಿಲ್ಲಾಧಿಕಾರಿಗಳು ಹೊರಡಿಸಿದ್ದಾರೆ. ಬೆಳಿಗ್ಗೆ 6 ಗಂಟೆಯಿಂದ 8 ಗಂಟೆವರೆಗೆ ಸಾರ್ವಜನಿಕರಿಗೆ ಹಾಲು ಮತ್ತು ದಿನಪತ್ರಿಕೆ ಖರೀದಿಗೆ ಮತ್ತು ಹಾಲು ವಿತರಕರಿಗೆ ಹಾಲು ವಿತರಿಸಲು ಅವಕಾಶ ಕಲ್ಪಿಸಲಾಗಿದೆ.ಜಿಲ್ಲೆಯ ಕಾಫಿ ತೋಟಗಳಿಗೆ ಕಾರ್ಮಿಕರು ಗುಂಪಾಗಿ ತೆರಳುವುದು ಮತ್ತು ಗುಂಪಾಗಿ ಕೆಲಸ ಮಾಡುವುದು ಕಂಡುಬಂದಿದ್ದು, ಈ ರೀತಿ ಗುಂಪಾಗಿ ತೆರಳಿ ಕೆಲಸ ಮಾಡುವುದನ್ನು ನಿಷೇಧಿಸಲಾಗಿದೆ.ಬೆಳಿಗ್ಗೆ 5 ಗಂಟೆಯಿಂದ 7 ಗಂಟೆವರೆಗೆ ದಿನಪತ್ರಿಕೆ ಸೆಗ್ರಿಗೇಷನ್ (ವಿಭಜನೆ) ಮಾಡಲು ವಿತರಣೆದಾರರಿಗೆ ಹಾಗೂ ದಿನಪತ್ರಿಕೆಯನ್ನು ಮನೆ ಮನೆಗೆ ವಿತರಣೆ ಮಾಡುವ ಪೇಪರ್ ಬಾಯ್ಸ್ಗಳಿಗೆ ಪೇಪರ್ ವಿತರಿಸಲು ಬೆ. 8.30ರ ವರೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಸರ್ಕಾರಿ ನ್ಯಾಯಬೆಲೆ ಅಂಗಡಿಗಳಿಗೆ ವಿನಾಯಿತಿ ನೀಡಲಾಗಿದೆ.