ಯಾವುದೇ ಸಮಸ್ಯೆಯಾದರೂ ಅದನ್ನು ಎದುರಿಸುವುದು ಬೇರೆ, ತಡೆಹಿಡಿಯುವುದು ಬೇರೆ. ಇಂದು ಕೋವಿಡ್-19 ರೋಗಾಣು ಮಾನವರೆಲ್ಲರ ಶರೀರ ಪ್ರವೇಶಿಸಲು ಹೆಣಗಾಡುತ್ತಿದೆ. ಅದು ನಮ್ಮನ್ನು ಪೀಡಿತರನ್ನಾಗಿ ಮಾಡುವ ಮೊದಲು, ಎದುರಿಸಲು ತಯಾರಿ, ರೋಗ ನಿರೋಧಕ ಶಕ್ತಿ ಬೆಳೆಸಿಕೊಳ್ಳಲು ಯತ್ನಿಸುವುದು ಅವಶ್ಯ.
ತಾನು ಮಾಡಿದ್ದೇ ಸರಿ ಎಂಬ ಸ್ವೇಚ್ಛಾಚಾರೀ ಮನೋಭಾವ ದೊಂದಿಗೆ ಕೊಬ್ಬಿ ಬೆಳೆದಿರುವ ಮಾನವನ ಮನಸ್ಸು ಇಂದು ಬೇರೊಬ್ಬರು ಹೇಳುವ ವಿಚಾರ ಗ್ರಹಿಸುವ - ಗೌರವಿಸುವ ಸ್ವಭಾವದಿಂದ ದೂರ ಉಳಿದಿದೆ. ಹಾಗಾಗಿ ಇಂದು ಕೋವಿಡ್-19 ರೋಗಾಣುವಿನ ಅಪಾಯಕಾರೀ ಪರಿಣಾಮದ ಕುರಿತು ಸರಕಾರ, ವೈದ್ಯಕೀಯ ರಂಗ ಹೇಳಿದರೂ, ಕಣ್ಣೆದುರೇ ವಿದೇಶೀಯರು ಕ್ರಿಮಿಗಳಂತೆ ಉದುರಿ ಆರ್ತನಾದಗೈ ಯುತ್ತಿದ್ದರೂ ‘ಅದು ತನಗಲ್ಲ’ ಎಂಬ ಬೇಜವಾಬ್ದಾರೀ ಮನೋಭಾವ ಮಾನವನದ್ದಾಗಿದೆ.
ಕೊರೊನಾದಿಂದಾಗಿ ಒಂದಷ್ಟು ದಿನ ಸಿಕ್ಕಿರುವ ಸಮಯದ ಸದ್ಭಳಕೆ ಮಾಡಿ. ಓದುವ ಹವ್ಯಾಸ, ಧ್ಯಾನ, ಪ್ರಾಣಾಯಾಮ, ಯೋಗಾಭ್ಯಾಸಗಳಲ್ಲಿ ತೊಡಗಿಸಿಕೊಳ್ಳಿ. ಗಂಡಸರೂ ಅಡುಗೆ ಮಾಡಲು ಕಲಿಯಿರಿ. ಮಕ್ಕಳೊಂದಿಗೆ, ಪತ್ನಿಯೊಂದಿಗೆ ಹರಟೆ - ನಗುನಗುತ್ತಿರಿ.
ಪ್ರಾಣಾಯಾಮ: ಉಸಿರಿನ ಮೇಲಿನ ನಿಯಂತ್ರಣದಿಂದ ಋಷಿ-ಮುನಿಗಳು ಆಹಾರ ವಿಲ್ಲದೆ ಬದುಕುತ್ತಿ ದ್ದರು. ಆರೋಗ್ಯ ರಕ್ಷಿಸಿಕೊಳ್ಳುತ್ತಿದ್ದರು. ವಸ್ತ್ರವಿಲ್ಲದೆ ಹಿಮಾಲಯದ ಛಳಿಯಲ್ಲಿ ಜೀವಿಸು ತ್ತಿದ್ದರು. ಈಗಲೂ ಇದ್ದಾರೆ.
ಭಸ್ತ್ರಿಕ, ಕಪಾಲಬಾತಿ ಮತ್ತು ಅನುಲೋಮ ವಿಲೋಮ ಪ್ರಾಣಾ ಯಾಮ ಮುಖ್ಯ ವಾಗಿದ್ದು, ಶರೀರ ಹಾಗೂ ಮನಸ್ಸಿನಲ್ಲಿ ಚೈತನ್ಯ ವೃದ್ಧಿಯಾಗುತ್ತದೆ. ಆಳವಾಗಿ - ದೀರ್ಘವಾಗಿ ಉಸಿರನ್ನು ಒಳತೆಗೆಯು ವುದು ಮತ್ತು ಹೊರ ಬಿಡುವುದಕ್ಕೆ ಭಸ್ತ್ರಿಕ ಪ್ರಾಣಾಯಾಮ ಅನ್ನುತ್ತಾರೆ. ಹತ್ತರಿಂದ ಹನ್ನೆರಡು ಬಾರಿ ಮಾಡಿ.
ಹೊಟ್ಟೆಯ ಭಾಗ ಒಳಭಾಗ ಕಟ್ಟುವಂತೆ ಶಬ್ದಸಹಿತ ಉಸಿರನ್ನು ಹೊರಹಾಕು ವುದಕ್ಕೆ ಕಪಾಲಬಾತಿ ಅನ್ನುತ್ತಾರೆ. ಇದನ್ನು ಇಪ್ಪತ್ತು ಬಾರಿ ಮಾಡಿ (ಅಭ್ಯಾಸ ಇರುವ ವರು ಶಕ್ತ್ಯಾನುಸಾರ ಮಾಡ ಬಹುದು).
ಮೂರನೆಯದು ಅನುಲೋಮ ವಿಲೋಮ. ಹೆಬ್ಬೆರಳಿನಿಂದ ಮೂಗಿನ ಬಲರಂಧ್ರವನ್ನು ಮುಚ್ಚಿ ಎಡರಂಧ್ರ ದಿಂದ ನಿಧಾನವಾಗಿ ಉಸಿರು ಎಳೆದುಕೊಳ್ಳಿ. ಉಂಗುರ ಬೆರಳಿನಿಂದ ಎಡರಂಧ್ರ ಮುಚ್ಚಿ ಬಲರಂಧ್ರ ದಿಂದ ಉಸಿರು ಬಿಟ್ಟು, ಉಸಿರು ಎಳೆದುಕೊಳ್ಳಿ. ಬಲರಂಧ್ರ ಮುಚ್ಚಿ - ಎಡರಂಧ್ರ ದಿಂದ ಉಸಿರು ಬಿಡಿ. ಉಸಿರು ಎಳೆದು ಕೊಂಡು ಬಲರಂಧ್ರ ದಿಂದ ಬಿಟ್ಟು - ಹೀಗೆ ಮುಂದುವರೆಯಿರಿ. ಪ್ರಾಣಾಯಾಮವು ಆರೋಗ್ಯ ವೃದ್ಧಿ ಮಾಡುವುದ ರೊಂದಿಗೆ ಆತ್ಮ - ಪರಮಾತ್ಮರನ್ನು ಜೊತೆಗೂಡಿಸುವ ಅವ್ಯಕ್ತ ಕ್ರಿಯೆ ಮಾಡುತ್ತದೆ.
ಕಷಾಯ: ಬೆಳಿಗ್ಗೆ ಹಾಗೂ ರಾತ್ರಿ ಮಲಗುವ ಮೊದಲು ಅರ್ಧಲೋಟ ಕಷಾಯ ಸೇವಿಸುವುದು ಉತ್ತಮ ಅನ್ನುತ್ತಾರೆ.
ಅಳತೆಗೆ ತಕ್ಕ ಶುಂಠಿ, ಬೆಳ್ಳುಳ್ಳಿ, ದಾಲ್ಚೀನಿ, ಅರಿಶಿನ ಪುಡಿ, ಕಾಳುಮೆಣಸು, ನಿಂಬೆ ರಸ ಸೇರಿಸಿ ಒಂದು ಪಾತ್ರೆ ನೀರು ಅರ್ಧಕ್ಕೆ ಇಳಿಯು ವಷ್ಟು ಕುದಿಸಬೇಕು. ಹಾಗೇ, ಆಗಿಂದಾಗ್ಗೆ ಬಿಸಿನೀರು ಸೇವಿಸುವುದರಿಂದ ಕಮರಿದ ಚೈತನ್ಯ ಅರಳಲಾರಂಭಿ ಸುತ್ತದೆ.
ಧ್ಯಾನಿಸಿ: ಹೇಗೆ ಕೊರೊನಾ ವಿಶ್ವಕ್ಕೆಲ್ಲ ಒಂದೇ ರೋಗಾಣುವಾಗಿ ಪಸರಿಸುತ್ತಿದೆಯೋ ಹಾಗೇ ನಿಯಾ ಮಕನೂ ಲೋಕಕ್ಕೆಲ್ಲಾ ಒಬ್ಬನೇ.
ಶುಭ್ರ ಮನಸ್ಸಿನಿಂದ ಏಕಾಂತ ದಲ್ಲಿ ಅಥವಾ ಮನೆಯವರೊಂದಿಗೆ ಕುಳಿತು, ಕಣ್ಮುಚ್ಚಿ ನಿಯಾಮಕನಿಗೆ ವಂದಿಸಿ. ಆತನ ಸೃಷ್ಟಿ ವೈಭವವನ್ನು ಸ್ಮರಿಸಿ. ಆತನ ವಿಷಾಲ ಹರವುವಿಕೆ ಯನ್ನು ಆಲೋಚಿಸಿ. ಆತನ ವಿಷಾಲತೆಯೊಂದಿಗೇ ಮನಸ್ಸನ್ನೂ ವಿಷಾಲಗೊಳಿಸುತ್ತಾ, ಆತನಿಗೆ ಸಾಷ್ಟಾಂಗ ಶರಣಾಗಿ. ನೀವು ಸೀಮಿತ ಜೀವಿಯಲ್ಲ - ಅಸಾಮಾನ್ಯ ಜೀವಿ - ಎಲ್ಲರಲ್ಲೂ ಇರುವ ವಿಶೇಷ ಜೀವಿ ಎಂಬ ಸತ್ಯವನ್ನು ಮನದಟ್ಟು ಮಾಡಿಕೊಳ್ಳಿ. ಆನಂದದಿಂದ ಕಣ್ಣುಬಿಟ್ಟು - ಏಕತಾ ಭಾವದಿಂದ ದಿನಚರಿ ಮುಂದುವರಿಸಿ.
ನಿಮ್ಮನ್ನು ನಿಮಗೆ ಸರಿಯಾಗಿ ಪರಿಚಯ ಮಾಡಿಕೊಳ್ಳಲು ಸಿಕ್ಕಿದ ಅವಕಾಶವನ್ನು ಬಳಸಿಕೊಳ್ಳಿ.
-ಬಿ.ಜಿ. ಅನಂತಶಯನ.