ಮಡಿಕೇರಿ, ಮಾ. 24: ವಿಶ್ವವನ್ನೇ ಬೆಚ್ಚಿ ಬೀಳಿಸಿರುವ ಮಹಾಮಾರಿ ಕೊರೊನಾ ವೈರಸ್ ಸೋಂಕಿತ ಹಾಗೂ ಶಂಕಿತ ವ್ಯಕ್ತಿಗಳಿಗೆ ನೀಡಲಾಗುವ ಚಿಕಿತ್ಸೆ ಹಾಗೂ ಅವರುಗಳ ಮೇಲೆ ನಿಗಾವಹಿಸ ಲಾಗುವ ಕ್ರಮಗಳ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮೋಹನ್ ಮಾಹಿತಿ ನೀಡಿದ್ದಾರೆ.ಕೊರೊನಾ ಪೀಡಿತರು ಹಾಗೂ ಶಂಕಿತ ವ್ಯಕ್ತಿಗಳಿಗೆ ಆರೋಗ್ಯ ಇಲಾಖೆ ವತಿಯಿಂದ ನೀಡಲಾಗುವ ಚಿಕಿತ್ಸೆ ಹಾಗೂ ಕ್ರಮಗಳ ಬಗ್ಗೆ ಆರೋಗ್ಯಾಧಿಕಾರಿಗಳಲ್ಲಿ ‘ಶಕ್ತಿ’ ಮಾಹಿತಿ ಬಯಸಿತು. ಯಾವುದೇ ವ್ಯಕ್ತಿ ಕೆಮ್ಮು, ಶೀತ, ನೆಗಡಿ ಎಂದು ಅಥವಾ ಕೊರೊನಾ ಶಂಕೆಯೊಂದಿಗೆ ಆಸ್ಪತ್ರೆಯನ್ನು ಸಂಪರ್ಕಿಸಿದ ಸಂದರ್ಭ ವ್ಯಕ್ತಿಯ ಗಂಟಲಿನ ದ್ರವವನ್ನು ನೈಲಾನ್ ದಾರದ ಮೂಲಕ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು. ಪ್ರಯೋಗಾಲಯ ದಿಂದ ವರದಿ ಬರುವ ತನಕ ವ್ಯಕ್ತಿಯನ್ನು ಜಿಲ್ಲಾಸ್ಪತ್ರೆಯಲ್ಲಿ ತೆರೆಯಲಾಗಿರುವ ಐಸೋಲೇಶನ್ ವಾರ್ಡ್‍ನಲ್ಲಿರಿಸಿ 14 ದಿನಗಳ ಕಾಲ ನಿಗಾವಹಿಸಲಾಗುವುದು. ಅದರ ನಡುವೆ ವರದಿಯಲ್ಲಿ ದೃಢಪಟ್ಟಲ್ಲಿ ಸೋಂಕಿತ ವ್ಯಕ್ತಿಯನ್ನು ಪ್ರತ್ಯೇಕ ಕೋಣೆಯಲ್ಲಿರಿಸ ಲಾಗುವುದು ಎಂದು ಮಾಹಿತಿ ನೀಡಿದರು.ಸೋಂಕಿತ ವ್ಯಕ್ತಿಗೆ ಪ್ರತ್ಯೇಕ ಕೊಠಡಿಯಲ್ಲಿ ರೋಗ ನಿರೋಧಕ (ಆ್ಯಂಟಿ ವೈರಲ್) ಔಷಧಿಯೊಂದಿಗೆ ಶುಶ್ರೂಷೆ ನೀಡಲಾಗುವುದು.
(ಮೊದಲ ಪುಟದಿಂದ) ಸರಕಾರದ ಮಾರ್ಗದರ್ಶನದಂತೆ ಚಿಕಿತ್ಸೆ ನೀಡಲಾಗುವುದು. ಆಸ್ಪತ್ರೆಯಿಂದಲೇ ಊಟೋಪಾಚಾರಗಳನ್ನು ಒದಗಿಸಲಾಗುವುದೆಂದು ತಿಳಿಸಿದರು.
ಶಂಕಿತರಿಗೆ ಹೋಂ ಕ್ವಾರಂಟೈನ್ : ಕೊರೊನಾ ಶಂಕೆಯೊಂದಿಗೆ ತಪಾಸಣೆಗೆ ಒಳಗಾಗಿ ವೈದ್ಯಕೀಯ ವರದಿಯಲ್ಲಿ ಸೋಂಕು ಪತ್ತೆಯಾಗದಿದ್ದಲ್ಲಿ (ನೆಗೆಟಿವ್) ಅಂತಹವರನ್ನು ಐಸೋಲೇಶನ್ ವಾರ್ಡ್‍ನಿಂದ ಬಿಡುಗಡೆಗೊಳಿಸಿ ಅವರ ಮನೆಗಳಿಗೆ ಕಳುಹಿಸಿಕೊಡಲಾಗುವುದು. ಅಂತಹ ವ್ಯಕ್ತಿಗಳ ಕೈಗಳಿಗೆ ಸೀಲ್ ಹಾಕಲಿದ್ದು, ಅವರುಗಳು ಮನೆ ಬಿಟ್ಟು ಬೇರೆಲ್ಲಿಗೂ ತೆರಳುವಂತಿಲ್ಲ. ನಿಯಾಮನುಸಾರ ಒಂದು ಮನೆಯಲ್ಲಿ ಹೆಚ್ಚು ಕುಟುಂಬ ಸದಸ್ಯರುಗಳಿದ್ದರೆ ಶಂಕಿತ ವ್ಯಕ್ತಿಯನ್ನು ಪ್ರತ್ಯೇಕ ಕೋಣೆಯಲ್ಲಿರಿಸಿ ಆ ವ್ಯಕ್ತಿಗೆ ಊಟೋಪಚಾರ ಒದಗಿಸಲು ಓರ್ವ ವ್ಯಕ್ತಿಯನ್ನು ನೇಮಿಸಿಕೊಳ್ಳಬೇಕು. ನಿಯೋಜಿತ ವ್ಯಕ್ತಿಗೆ ಮಾತ್ರ ದಿನಸಿ, ಇತ್ಯಾದಿ ಸಾಮಗ್ರಿ ಖರೀದಿಸಲು ಇಲಾಖೆಯ, ಪೊಲೀಸರ ಅನುಮತಿಯೊಂದಿಗೆ ಮನೆಯಿಂದ ಹೊರ ಬರಲು ಅವಕಾಶವಿದೆ. ಆ ವ್ಯಕ್ತಿ ಕೂಡ ಅಂತರ ಕಾಯ್ದುಕೊಂಡು ಯಾರನ್ನು ಸಂಪರ್ಕಿಸದೆ ವ್ಯವಹರಿಸಬೇಕಿದೆ. ಉಳಿದಂತೆ ಇತರ ಸದಸ್ಯರುಗಳು ಯಾರೂ ಕೂಡ ಮನೆಯಿಂದ ಹೊರ ಬರುವಂತಿಲ್ಲ. ಇದನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಸೋಂಕು ಹರಡುವುದನ್ನು ತಡೆಗಟ್ಟಬಹುದೆಂದು ಮಾಹಿತಿ ನೀಡಿದರು.
‘ಕಂಟೈನ್‍ಮೆಂಟ್ ತಯಾರಿಸಿ’
ಕೊರೊನಾ ಸೋಂಕಿತ ವ್ಯಕ್ತಿ ಪತ್ತೆಯಾದ ಬಳಿಕ ಆತ ವಾಸ ಮಾಡುತ್ತಿರುವ ಗ್ರಾಮವನ್ನು ‘ಕಂಟೈನ್‍ಮೆಂಟ್ ಏರಿಯಾ’ (ನಿಷೇದಿತ ವಲಯ) ಎಂದು ಪರಿಗಣಿಸಿ, ನಾಕಾಬಂಧಿ ವಿಧಿಸಲಾಗುವುದು. ಆ ಪ್ರದೇಶದಲ್ಲಿ ಎಷ್ಟು ಮಂದಿ ವಾಸವಿದ್ದಾರೋ ಅವರುಗಳನ್ನೆಲ್ಲ ಗೃಹ ಬಂಧನದಲ್ಲಿರಿಸಲಾಗುವುದು. ಆರೋಗ್ಯ ಇಲಾಖೆ ಸಿಬ್ಬಂದಿಗಳು, ವೈದ್ಯರು ಹಾಗೂ ಪೊಲೀಸರ ಕಣ್ಗಾವಲಿನಲ್ಲಿ ಇರಿಸಲಾಗುತ್ತದೆ. ಯಾರೊಬ್ಬರೂ ಒಳ - ಹೊರ ಹೋಗುವಂತಿಲ್ಲ ಅವರುಗಳಿಗೆ ಬೇಕಾದ ಅಗತ್ಯ ವಸ್ತುಗಳನ್ನು ಜಿಲ್ಲಾಡಳಿತದ ವತಿಯಿಂದ ಆಹಾರ ಇಲಾಖೆ ಮೂಲಕ ಪೂರೈಸಲಾಗುವುದೆಂದು ಡಾ. ಮೋಹನ್ ತಿಳಿಸಿದರು.
ಪ್ರಸ್ತುತ ಕೊಂಡಂಗೇರಿ ಬಳಿಯ ಕುತ್ತುಮೊಟ್ಟ್ಟೆಯಲ್ಲಿನ ವ್ಯಕ್ತಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಆ ಪ್ರದೇಶವನ್ನು ನಿಷೇದಿತ ವಲಯವನ್ನಾಗಿ ಪರಿಗಣಿಸಲಾಗಿದೆ. 75 ಮನೆಗಳ 306 ಮಂದಿ ಇದ್ದು 14 ದಿನಗಳ ಕಾಲ ಅವರುಗಳನ್ನು ಗೃಹ ಬಂಧನದಲ್ಲಿರಿಸುತ್ತಾರೆ. ಪ್ರತಿ 25 ಮನೆಗಳಿಗೆ ಒಂದರಂತೆ ಓರ್ವ ವೈದ್ಯರುಗಳನ್ನೊಳಗೊಂಡ ಮೂರು ತಂಡಗಳನ್ನು ರಚಿಸಲಾಗಿದ್ದು, ಆ ತಂಡಗಳು ಪ್ರತಿದಿನ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ (ಮೊದಲ ಪುಟದಿಂದ) ಸರಕಾರದ ಮಾರ್ಗದರ್ಶನದಂತೆ ಚಿಕಿತ್ಸೆ ನೀಡಲಾಗುವುದು. ಆಸ್ಪತ್ರೆಯಿಂದಲೇ ಊಟೋಪಾಚಾರಗಳನ್ನು ಒದಗಿಸಲಾಗುವುದೆಂದು ತಿಳಿಸಿದರು.
ಶಂಕಿತರಿಗೆ ಹೋಂ ಕ್ವಾರಂಟೈನ್ : ಕೊರೊನಾ ಶಂಕೆಯೊಂದಿಗೆ ತಪಾಸಣೆಗೆ ಒಳಗಾಗಿ ವೈದ್ಯಕೀಯ ವರದಿಯಲ್ಲಿ ಸೋಂಕು ಪತ್ತೆಯಾಗದಿದ್ದಲ್ಲಿ (ನೆಗೆಟಿವ್) ಅಂತಹವರನ್ನು ಐಸೋಲೇಶನ್ ವಾರ್ಡ್‍ನಿಂದ ಬಿಡುಗಡೆಗೊಳಿಸಿ ಅವರ ಮನೆಗಳಿಗೆ ಕಳುಹಿಸಿಕೊಡಲಾಗುವುದು. ಅಂತಹ ವ್ಯಕ್ತಿಗಳ ಕೈಗಳಿಗೆ ಸೀಲ್ ಹಾಕಲಿದ್ದು, ಅವರುಗಳು ಮನೆ ಬಿಟ್ಟು ಬೇರೆಲ್ಲಿಗೂ ತೆರಳುವಂತಿಲ್ಲ. ನಿಯಾಮನುಸಾರ ಒಂದು ಮನೆಯಲ್ಲಿ ಹೆಚ್ಚು ಕುಟುಂಬ ಸದಸ್ಯರುಗಳಿದ್ದರೆ ಶಂಕಿತ ವ್ಯಕ್ತಿಯನ್ನು ಪ್ರತ್ಯೇಕ ಕೋಣೆಯಲ್ಲಿರಿಸಿ ಆ ವ್ಯಕ್ತಿಗೆ ಊಟೋಪಚಾರ ಒದಗಿಸಲು ಓರ್ವ ವ್ಯಕ್ತಿಯನ್ನು ನೇಮಿಸಿಕೊಳ್ಳಬೇಕು. ನಿಯೋಜಿತ ವ್ಯಕ್ತಿಗೆ ಮಾತ್ರ ದಿನಸಿ, ಇತ್ಯಾದಿ ಸಾಮಗ್ರಿ ಖರೀದಿಸಲು ಇಲಾಖೆಯ, ಪೊಲೀಸರ ಅನುಮತಿಯೊಂದಿಗೆ ಮನೆಯಿಂದ ಹೊರ ಬರಲು ಅವಕಾಶವಿದೆ. ಆ ವ್ಯಕ್ತಿ ಕೂಡ ಅಂತರ ಕಾಯ್ದುಕೊಂಡು ಯಾರನ್ನು ಸಂಪರ್ಕಿಸದೆ ವ್ಯವಹರಿಸಬೇಕಿದೆ. ಉಳಿದಂತೆ ಇತರ ಸದಸ್ಯರುಗಳು ಯಾರೂ ಕೂಡ ಮನೆಯಿಂದ ಹೊರ ಬರುವಂತಿಲ್ಲ. ಇದನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಸೋಂಕು ಹರಡುವುದನ್ನು ತಡೆಗಟ್ಟಬಹುದೆಂದು ಮಾಹಿತಿ ನೀಡಿದರು.
‘ಕಂಟೈನ್‍ಮೆಂಟ್ ತಯಾರಿಸಿ’
ಕೊರೊನಾ ಸೋಂಕಿತ ವ್ಯಕ್ತಿ ಪತ್ತೆಯಾದ ಬಳಿಕ ಆತ ವಾಸ ಮಾಡುತ್ತಿರುವ ಗ್ರಾಮವನ್ನು ‘ಕಂಟೈನ್‍ಮೆಂಟ್ ಏರಿಯಾ’ (ನಿಷೇದಿತ ವಲಯ) ಎಂದು ಪರಿಗಣಿಸಿ, ನಾಕಾಬಂಧಿ ವಿಧಿಸಲಾಗುವುದು. ಆ ಪ್ರದೇಶದಲ್ಲಿ ಎಷ್ಟು ಮಂದಿ ವಾಸವಿದ್ದಾರೋ ಅವರುಗಳನ್ನೆಲ್ಲ ಗೃಹ ಬಂಧನದಲ್ಲಿರಿಸಲಾಗುವುದು. ಆರೋಗ್ಯ ಇಲಾಖೆ ಸಿಬ್ಬಂದಿಗಳು, ವೈದ್ಯರು ಹಾಗೂ ಪೊಲೀಸರ ಕಣ್ಗಾವಲಿನಲ್ಲಿ ಇರಿಸಲಾಗುತ್ತದೆ. ಯಾರೊಬ್ಬರೂ ಒಳ - ಹೊರ ಹೋಗುವಂತಿಲ್ಲ ಅವರುಗಳಿಗೆ ಬೇಕಾದ ಅಗತ್ಯ ವಸ್ತುಗಳನ್ನು ಜಿಲ್ಲಾಡಳಿತದ ವತಿಯಿಂದ ಆಹಾರ ಇಲಾಖೆ ಮೂಲಕ ಪೂರೈಸಲಾಗುವುದೆಂದು ಡಾ. ಮೋಹನ್ ತಿಳಿಸಿದರು.
ಪ್ರಸ್ತುತ ಕೊಂಡಂಗೇರಿ ಬಳಿಯ ಕುತ್ತುಮೊಟ್ಟ್ಟೆಯಲ್ಲಿನ ವ್ಯಕ್ತಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಆ ಪ್ರದೇಶವನ್ನು ನಿಷೇದಿತ ವಲಯವನ್ನಾಗಿ ಪರಿಗಣಿಸಲಾಗಿದೆ. 75 ಮನೆಗಳ 306 ಮಂದಿ ಇದ್ದು 14 ದಿನಗಳ ಕಾಲ ಅವರುಗಳನ್ನು ಗೃಹ ಬಂಧನದಲ್ಲಿರಿಸುತ್ತಾರೆ. ಪ್ರತಿ 25 ಮನೆಗಳಿಗೆ ಒಂದರಂತೆ ಓರ್ವ ವೈದ್ಯರುಗಳನ್ನೊಳಗೊಂಡ ಮೂರು ತಂಡಗಳನ್ನು ರಚಿಸಲಾಗಿದ್ದು, ಆ ತಂಡಗಳು ಪ್ರತಿದಿನ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಪ್ರತಿ ಮನೆಗಳಿಗೆ ಭೇಟಿ ನೀಡಿ ಸರ್ವೆ ಕಾರ್ಯ ನಡೆಸುತ್ತಾರೆ. ಕುಟುಂಬದ ವ್ಯಕ್ತಿಗಳಲ್ಲಿ ಜ್ವರ, ಕೆಮ್ಮು, ನೆಗಡಿ ಇದೆಯೇ ಎಂದು ಪರೀಕ್ಷಿಸುತ್ತಾರೆ. ಒಂದು ವೇಳೆ ಪತ್ತೆಯಾದರೆ ಅಂತಹವರನ್ನು ಐಸೋಲೇಶನ್ ವಾರ್ಡ್‍ಗೆ ಸ್ಥಳಾಂತರಿಸಲಾಗುವುದು. ಆದರೆ ಇದುವರೆಗೆ ಯಾವುದೇ ಅಂತಹ ಕುರುಹು ಪತ್ತೆಯಾಗಿಲ್ಲವೆಂದು ಹೇಳಿದರು.
ಬಫರ್ ಝೋನ್ : ಕಂಟೈನ್‍ಮೆಂಟ್ ಏರಿಯಾದ ಸುತ್ತಲಿನ 2 ಕಿ.ಮೀ. ವ್ಯಾಪ್ತಿಯಲ್ಲಿ ಬಫರ್ ಝೋನ್ ಎಂದು ವಿಂಗಡಿಸಲಾಗುವುದು. ಈ ಪ್ರದೇಶದಲ್ಲಿ ಜನರು ಓಡಾಡಬಹುದಾಗಿದೆ. ಆದರೆ ನಿಷೇದಿತ ವಲಯದತ್ತ ಸುಳಿಯಬಾರದು. ಅತ್ತ ಸುಳಿಯದಂತೆ ಪೊಲೀಸರು ನಿಗಾ ವಹಿಸಲಿದ್ದಾರೆಂದು ತಿಳಿಸಿದರು.
ಕುಟುಂಬದ ತಪಾಸಣೆ : ಸರಕಾರದ ನಿನ್ನೆಯ ಆದೇಶದಂತೆ ವೈರಸ್ ಸೋಂಕಿತ ವ್ಯಕ್ತಿಯ ಕುಟುಂಬ ಸದಸ್ಯರನ್ನು ಪ್ರತ್ಯೇಕವಾಗಿ ತಪಾಸಣೆಗೆ ಒಳಪಡಿಸಲಾಗಿದೆ. ಸೋಂಕಿತ ವ್ಯಕ್ತಿಯ ತಾಯಿ, ಪತ್ನಿ, ಮಕ್ಕಳು ಹಾಗೂ ಸಹೋದರಿ ಸೇರಿದಂತೆ ಒಟ್ಟು 20 ಮಂದಿಯನ್ನು ತಪಾಸಣೆಗೆ ಒಳಪಡಿಸ ಲಾಗಿದೆ. ಅವರುಗಳ ಗಂಟಲ ದ್ರವವನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಡಾ. ಮೋಹನ್ ಮಾಹಿತಿ ನೀಡಿದರು.