ನಾಪೆÇೀಕ್ಲು, ಮಾ. 23: ಎತ್ತು ತಿವಿದು ವ್ಯಕ್ತಿಯೋರ್ವರು ಮೃತಪಟ್ಟ ದಾರುಣಾ ಘಟನೆ ಸಮೀಪದ ಚೆಯ್ಯಂಡಾಣೆ ನರಿಯಂದಡ ಗ್ರಾಮದಲ್ಲಿ ನಡೆದಿದೆ.ಗ್ರಾಮ ನಿವಾಸಿ ಚೆಯ್ಯಂಡಾಣೆ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷರಾಗಿದ್ದ ಕುಕ್ಕುಮನೆ ಸುಬಮಣ್ಯ (40) ಎತ್ತು ತಿವಿದು ಮೃತಪಟ್ಟ ದುರ್ದೈವಿ. ಇಂದು ಬೆಳಿಗ್ಗೆ 9 ಗಂಟೆ ಸುಮಾರಿಗೆ ತಾವು ಸಾಕಿದ ಎತ್ತನ್ನು ಗದ್ದೆಯಲ್ಲಿ ಮೇಯಲು ಬಿಡುವ ಸಂದರ್ಭದಲ್ಲಿ ಎತ್ತು ಏಕಾಏಕಿ ಇವರ ಮೇಲೆ ಧಾಳಿ ನಡೆಸಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ವಲ್ಪ ಸಮಯದ ನಂತರ ಸಮೀಪದ ಗದ್ದೆಗೆ ಬಂದ ವ್ಯಕ್ತಿಯೊಬ್ಬರು ಮೃತದೇಹವನ್ನು ಕಂಡು ಯಾರೋ ಕೆಲಸದವನು ಬಿದ್ದಿದ್ದಾನೆ ಎಂದು ನರಿಯಂದಡ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶರಣ್ ಅವರಿಗೆ ತಿಳಿಸಿದ್ದಾರೆ. ಅವರು ಬಂದು ವೀಕ್ಷಿಸಿದಾಗ ಅದು ಸುಬ್ರಮಣ್ಯ ಎಂದು ತಿಳಿದು ಬಂದಿದೆ.
ಮೃತ ದೇಹದ ಮರಣೋತ್ತರ ಪರೀಕ್ಷೆಯನ್ನು ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಈ ಬಗ್ಗೆ ನಾಪೆÇೀಕ್ಲು ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಮೃತರು ಪತ್ನಿ ಹಾಗೂ ಹೆಣ್ಣು ಮಗುವನ್ನು ಅಗಲಿದ್ದಾರೆ.