ವಿಶೇಷ ವರದಿ: ಹೆಚ್.ಕೆ. ಜಗದೀಶ್
ಗೋಣಿಕೊಪ್ಪಲು, ಮಾ. 23: ತಮ್ಮ ಹಿರಿಯ ವಯಸ್ಸಿನಲ್ಲಿ ತಮ್ಮ ಮನೆಗಳಲ್ಲಿ,ಮಕ್ಕಳೊಂದಿಗೆ ಕಾಲ ಕಳೆಯುವ ಸಮಯದಲ್ಲಿ ಇವುಗಳನ್ನೆಲ್ಲ ಬದಿಗೊತ್ತಿ ಸಮಾಜಕ್ಕೆ ಏನಾದರೊಂದು ಉತ್ತಮ ಕೊಡುಗೆ ಕೊಡಬೇಕು, ಆ ನಿಟ್ಟಿನಲ್ಲಿ ತಮಗಳ ಹೆಸರು ಉಳಿಯಬೇಕು ಎಂಬ ಚಿಂತನೆಯೊಂದಿಗೆ ಕೆಲವೇ ಕೆಲವು ಹಿರಿಯರು ಸೇರಿ ಆರಂಭಿಸಿದ ವೇದಿಕೆಗೆ ಪೊನ್ನಂಪೇಟೆ ನಾಗರಿಕ ವೇದಿಕೆಯೆಂಬ ಹೆಸರನ್ನಿಟ್ಟು ಆ ಮೂಲಕ ತಾಲೂಕು ಹೋರಾಟದ ಕೆಲಸ ಆರಂಭಿಸಲಾಗಿತ್ತು.
ಮುಂಜಾನೆ ಸಮಿತಿಯ ಹಿರಿಯ ಪದಾಧಿಕಾರಿಗಳೆಲ್ಲರೂ ಕಚೇರಿಗೆ ತಪ್ಪದೆ ಆಗಮಿಸಿ ಅಂದಿನ ಪತ್ರಿಕೆಗಳಲ್ಲಿ ಪ್ರಕಟವಾಗುವ ಹಲವು ವಿಚಾರಗಳನ್ನು ಚರ್ಚೆ ಮಾಡುವುದ ರೊಂದಿಗೆ ಸಮಾಜದ ಅಂಕು ಡೊಂಕುಗಳ ವಿಮರ್ಶೆ ಮಾಡುತ್ತಿದ್ದರು. 2011-12ನೇ ಸಾಲಿನಲ್ಲಿ ಅಸ್ತಿತ್ವಕ್ಕೆ ಬಂದ ಈ ವೇದಿಕೆಯು ಸಣ್ಣ ಪ್ರಮಾಣದಲ್ಲಿ ಸಣ್ಣಪುಟ್ಟ ಸೇವೆಗಳನ್ನು ನೀಡುತ್ತ ಗ್ರಾಮೀಣ ಭಾಗದ ಜನತೆ ದೂರದ ತಾಲೂಕು ಕೇಂದ್ರ ವೀರಾಜಪೇಟೆಗೆ ತೆರಳುವುದನ್ನೆ ಮೂಲವಾಗಿಟ್ಟು ಕೊಂಡು ಗ್ರಾಮೀಣ ಜನತೆಗೆ ಇಂತಹ ಜಂಜಾಟದಿಂದ ಹೊರ ಬರುವ ಚಿಂತನೆ ನಡೆಸಿ ಪೊನ್ನಂಪೇಟೆ ತಾಲೂಕು ಕೇಂದ್ರವನ್ನಾಗಿ ಮಾಡಿದ್ದಲ್ಲಿ ಗ್ರಾಮೀಣ ಭಾಗದ ಜನತೆಗೆ ಅನುಕೂಲಕರ ವಾಗಲಿದೆ. ಎಂಬ ಚಿಂತನೆ ದಶಕದ ಹಿಂದೆಯೇ ವೇದಿಕೆಯ ಹಿರಿಯರು ಆರಂಭಿಸಿದ್ದರು.
ಆರಂಭದಲ್ಲಿ ಹಲವು ವಿಘ್ನಗಳು, ತಾತ್ಸಾರದ ನುಡಿಗಳು ಕೇಳಿ ಪೊನ್ನಂಪೇಟೆ ತಾಲೂಕು ಹೋರಾಟ ಸಮಿತಿಯಲ್ಲಿ ಗೌರವ ಅಧ್ಯಕ್ಷರಾಗಿ ಶಾಸಕ ಕೆ.ಜಿ. ಬೋಪಯ್ಯ, ಕಾರ್ಯಾಧ್ಯಕ್ಷರಾಗಿ ಚೆಪ್ಪುಡೀರ ಅರುಣ್ ಮಾಚಯ್ಯ, ಸಂಚಾಲಕರಾಗಿ ಮಾಚಿಮಾಡ ರವೀಂದ್ರ ಖಜಾಂಚಿಯಾಗಿ ಚೆಪ್ಪುಡೀರ ಕೆ. ಸೋಮಯ್ಯ ಹಾಗೂ ಅನುಭವಿ ಹಿರಿಯರನ್ನು ಸೇರಿಸಿಕೊಂಡು ಸಮಿತಿಯ ಸದಸ್ಯರಾದ ಆಲೀರ ಎರ್ಮು ಹಾಜಿ ಸಹಕಾರದಿಂದ ಕಳೆದ ಎರಡು ವರ್ಷದ ಹಿಂದೆ ಜೆಡಿಎಸ್ ಪಕ್ಷದಲ್ಲಿ ರಾಜ್ಯದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದ ತಿತಿಮತಿಯ ಮಾಂಗೇರ ಪದ್ಮಿನಿ ಪೊನ್ನಪ್ಪ ಅವರ ಮುಂದಾಳತ್ವದಲ್ಲಿ ಮಾಜಿ ಪ್ರಧಾನಿ ದೇವೇಗೌಡರನ್ನು, ಆಗಿನ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಇತರ ಸಚಿವರನ್ನು ಭೇಟಿ ಮಾಡಿದ ಸಂದರ್ಭವೆ ಇದಕ್ಕೊಂದು ಹೊಸ ತಾಲೂಕು ರಚನೆಗೆ ಮುನ್ನಡಿ ಬರೆಯಲಾಗಿತ್ತು. ಇವರ ಭೇಟಿ ಫಲ ನೀಡಿತ್ತು. ಮಾಜಿ ಪ್ರಧಾನಿ ದೇವೇಗೌಡರ ಸಲಹೆಯಂತೆ ತಾಲೂಕು ಘೋಷಣೆಗೆ ಸಹಕಾರಿಯಾಯಿತು. 72 ದಿನಗಳ ಅನಿರ್ಧಿಷ್ಟಾವಧಿ ಹೋರಾಟದಲ್ಲಿ ನೂರಾರು ಸಂಘ ಸಂಸ್ಥೆಗಳು ಒಟ್ಟಾಗಿ ಹೋರಾಟ ನಡೆಸಿದ್ದಕ್ಕೂ ಸಾರ್ಥಕತೆಯಾಯಿತು. ಹೊಸ ತಾಲೂಕು ರಚನೆಂiÀi ಆದೇಶ ಹೊರ ಬೀಳುತ್ತಿದ್ದಂತೆಯೇ ಜಿಲ್ಲಾಡಳಿತದೊಂದಿಗೆ ಚರ್ಚಿಸಿದ ಹಿರಿಯರು ಪೊನ್ನಂಪೇಟೆಯಲ್ಲಿರುವ ಹಳೆಯ ಆಹಾರ ನಿಗಮದ ಕಟ್ಟಡದಲ್ಲಿ ಆಡಳಿತ ಅನುಷ್ಠಾನಕ್ಕೆ ಮುಂದಾಗಿದೆ. ಕಟ್ಟಡ ದುರಸ್ತಿಗೊಳಿಸಿ ಸುಣ್ಣ ಬಣ್ಣ ಬಳಿದು, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿ, ಅಧಿಕಾರಿಗಳಿಗೆ ಕೆಲಸ ನಿರ್ವಹಿಸಲು ಪೀಠೋಪಕರಣಕ್ಕಾಗಿ ತಾವೇ ಬಜೆಟ್ ರೂಪಿಸಿದ್ದಾರೆ. ಸಾರ್ವಜನಿಕರಿಂದ, ದಾನಿಗಳಿಂದ ಸಹಕಾರ ಬಯಸಿದ್ದಾರೆ. ನೂತನ ತಾಲೂಕಿಗೆ ತಹಶೀಲ್ದಾರ್ ನೇಮಿಸಲು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ.ಬಂದರಾದರೂ ಇದ್ಯಾವುದಕ್ಕೂ ಬೇಸರಗೊಳ್ಳದ ವೇದಿಕೆಯ ಪದಾಧಿಕಾರಿಗಳು ಮತ್ತೆ ಮತ್ತೆ ತಮ್ಮ ಪ್ರಯತ್ನವನ್ನು ಆರಂಭಿಸಿದ್ದರು. ಒಂದಲ್ಲ ಒಂದು ದಿನ ಹೊಸ ತಾಲೂಕು ರಚನೆ ಆಗಲಿದೆ ಎಂಬ ವಿಶ್ವಾಸ ಹೊಂದಿದ್ದರು. ತಮ್ಮ ಕೈಯಿಂದಲೇ ಹಣವನ್ನು ಹಾಕಿಕೊಂಡು ಸಚಿವರ ಬಳಿ ತೆರಳಿ ಮನವಿ ಸಲ್ಲಿಸುತ್ತಿದ್ದರು. ಜಿಲ್ಲೆಗೆ ಮಂತ್ರಿಮಹೋದಯರು ಆಗಮಿಸಿದ ಸಂದರ್ಭ ಮತ್ತೆ ಮತ್ತೆ ಮನವಿ ಪತ್ರಗಳನ್ನು ನೀಡುತ್ತ ಹೊಸ ತಾಲೂಕು ರಚನೆಗೆ ಪಟ್ಟು ಹಿಡಿಯುತ್ತಿದ್ದರು. ತಮ್ಮ ವಯಸ್ಸು,ಆರೋಗ್ಯವನ್ನು ಲೆಕ್ಕಿಸದೆ ದೂರದ ಬೆಂಗಳೂರಿಗೆ ಶಾಸಕರ ಮೂಲಕ ವಿಧಾನ ಸೌಧಕ್ಕೆ ತೆರಳಿ ಅಲ್ಲಿ ಆಯಾ ಸಂದರ್ಭದ ಮುಖ್ಯ ಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸುತ್ತಿದ್ದರು. ಮುಖ್ಯಮಂತ್ರಿಗಳು ನೀಡುವ ಭರವಸೆಯೊಂದಿಗೆ ಆಗಮಿಸುತ್ತಿದ್ದ ಹಿರಿಯ ಜೀವಗಳು ಇಂದಲ್ಲ ನಾಳೆ ಫಲಿತಾಂಶ ಬಂದೇ ಬರುತ್ತದೆ ಎಂದು ಅಚಲ ವಿಶ್ವಾಸ ಹೊಂದಿದ್ದರು. ಇಂತಹ ವಿಶ್ವಾಸ, ನಂಬಿಕೆ ಇವರನ್ನು ಹುಸಿ ಗೊಳಿಸಲಿಲ್ಲ. ಇವರ ಹೋರಾಟಕ್ಕೆ ಫಲ ಇದೀಗ ಸಿಕ್ಕಿದೆ. ಹೋರಾಟಕ್ಕೆ ವಯಸ್ಸು ಅಡ್ಡಿ ಇಲ್ಲ ಎಂಬುದನ್ನು ಯುವಕರಿಗೆ ಸಾಬೀತು ಮಾಡಿದ್ದಾರೆ. ಇವರ ಉತ್ಸಾಹ, ಛಲ, ಇದೀಗ ಮತ್ತಷ್ಟು ಹಿಮ್ಮಡಿಗೊಂಡಿದೆ. ಇವರ ಹೋರಾ ಟವು ಎಲ್ಲರನ್ನು ನಿಬ್ಬೆರಗಾಗಿಸುವಂತೆ ಮಾಡಿದ್ದಾರೆ. ಜಿಲ್ಲಾಡಳಿತ ಹೊಸ ತಾಲೂಕು ರಚನೆಗೆ ಇನ್ನಷ್ಟು ವಿಳಂಬ ಮಾಡುವ ಹಿನ್ನಲೆ ಅರಿತ ಈ ವೇದಿಕೆಯು ತಾವೆ ಮುಂದೆ ನಿಂತು ಜಿಲ್ಲಾಧಿಕಾರಿಗಳ ಮನವೊಲಿಸಿ ಮುಖ್ಯಮಂತ್ರಿಗಳು ಹೊಸ ತಾಲೂಕಿಗೆ ಆಗಮಿಸಿ ಇಲ್ಲಿಯ ಹೊಸ ತಾಲೂಕನ್ನು ಉದ್ಘಾಟನೆಗೊಳಿಸ ಬೇಕೆಂದು ಮನವಿ ಮಾಡಿರುವುದಲ್ಲದೆ ಏಪ್ರಿಲ್ ತಿಂಗಳಿನಲ್ಲಿಯೇ ಪೊನ್ನಂಪೇಟೆ ತಾಲೂಕು ಉದ್ಘಾಟನೆ ನಡೆಯಬೇಕು ಎಂಬ ಅಭಿಲಾಷೆ ಇವರದ್ದಾಗಿದೆ. ಕಾರ್ಯಕ್ರಮದಲ್ಲಿ ಈ ಹೋರಾಟಕ್ಕೆ ದುಮುಕಿದ ಹಲವು ಮಂದಿಯನ್ನು ಗೌರವಿಸುವು ದರೊಂದಿಗೆ ಹಲವು ಕಾರ್ಯಕ್ರಮ ಗಳನ್ನು ಉದ್ಘಾಟನೆ ದಿನದಂದು ಹಮ್ಮಿಕೊಂಡಿದ್ದಾರೆ. ಇದಕ್ಕೆ ಬೇಕಾಗುವ ಆರ್ಥಿಕ ವ್ಯವಸ್ಥೆಯನ್ನು ದಾನಿಗಳ ಮೂಲಕ ಸಂಗ್ರಹಿಸಿ ಆ ಮೂಲಕ ತಮ್ಮ ಜವಾಬ್ದಾರಿಯನ್ನು ನಿಭಾಯಿಸಲು ಉತ್ಸುಕರಾಗಿದ್ದಾರೆ. ಕಾರ್ಯಕ್ರಮಕ್ಕೆ 21 ಪಂಚಾಯ್ತಿ ವ್ಯಾಪ್ತಿಯ ನಾಗರಿಕರನ್ನು ಆಹ್ವಾನಿಸಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಲು ಕಾತರದಲ್ಲಿದ್ದಾರೆ. ಹಿಡಿದ ಹಠ ಸಾಧಿಸಿದ ವೇದಿಕೆ ಸದಸ್ಯರು ಸಂಭ್ರಮ ದಲ್ಲಿದ್ದಾರೆ. ದಶಕದ ಹೋರಾಟಕ್ಕೆ ಹಿರಿಯರ ಪ್ರಾಮಾಣಿಕತೆ, ಬುದ್ದಿವಂತಿಕೆ, ಸಮಯ ಪ್ರಜ್ಞೆ ಹಾಗೂ ತಾಳ್ಮೆ ಫಲ ನೀಡಿದೆ. ನಿರಂತರ.72 ದಿನಗಳ ಕಾಲ ಹೋರಾಟ ನಡೆಸಿದ ಹಿನ್ನಲೆ ಪ್ರತಿಫಲವಾಗಿ ಪ್ರಸ್ತುತ ಪೊನ್ನಂಪೇಟೆ ತಾಲೂಕು ಸರ್ಕಾರದ ಮಟ್ಟದಲ್ಲಿ ಅಧಿಕೃತವಾಗಿ ಘೋಷಣೆ ಯಾಗಿದೆ. ರಾಜ್ಯದಲ್ಲಿ ಏಕೈಕ ತಾಲೂಕಾಗಿ ಘೋಷಣೆ ಯಾಗಿರುವುದು ಹಿರಿಯರು ಪಟ್ಟ ಶ್ರಮದ ಫಲ. ತಾಲೂಕು ಆಡಳಿತ ವ್ಯವಸ್ಥೆ ಅನುಷ್ಠಾನಕ್ಕೆ ಮಾತ್ರ ಸೀಮಿತಗೊಳ್ಳದೆ ಯೋಜನೆ ರೂಪಿಸುವುದರಲ್ಲೂ ಪ್ರಮುಖ ಪಾತ್ರ ವಹಿಸಿದ್ದಾರೆ. ಸರ್ಕಾರದಿಂದ ಹಣವನ್ನು ನಿರೀಕ್ಷಿಸದೆ ದಾನಿಗಳಿಂದ ಹಣ ಸಂಗ್ರಹಿಸಿ, ಆಡಳಿತ ವ್ಯವಸ್ಥೆ ಅನುಷ್ಠಾನಕ್ಕೆ ಮುಂದಾಗಿದ್ದಾರೆ. ತಾಲೂಕು ಹೋರಾಟ ಸಮಿತಿ ಹಾಗೂ ನಾಗರಿಕ ಹೋರಾಟ ಸಮಿತಿಯ ಆಶ್ರಯದಲ್ಲಿ ಕಳೆದ 1 ವಾರದ ಹಿಂದೆ ಇದಕ್ಕಾಗಿಯೇ ಸಭೆ ನಡೆಸಿ ಯೋಜನೆ ರೂಪಿಸಿದ್ದಾರೆ.