ನಾಪೆÇೀಕ್ಲು, ಮಾ. 23: ಕೊಡವ ನ್ಯಾಷನಲ್ ಕೌನ್ಸಿಲ್ ಕಳೆದ 27 ವರ್ಷಗಳಿಂದ ಕೊಡವ ಕುಲಕ್ಕೆ ಸಿಗಬೇಕಾದ ಬುಡಕಟ್ಟು ಸ್ಥಾನಮಾನ ಸೇರಿದಂತೆ ಎಲ್ಲಾ ಹಕ್ಕುಗಳ ಬಗ್ಗೆ ಹೋರಾಡುತ್ತಾ ಬಂದಿದೆ. ಅದು ಈಗ ಅಂತಿಮ ಘಟ್ಟ ತಲುಪಿದೆ. ಈ ಸಂದರ್ಭದಲ್ಲಿ ಕೊಡವ ಸಮಾಜಗಳ ಒಕ್ಕೂಟದ ಸಭೆಯಲ್ಲಿ ಎಲ್ಲಾ ಕೊಡವ ಸಮಾಜಗಳು ಬುಡಕಟ್ಟು ಸ್ಥಾನಮಾನಕ್ಕೆ ಹೋರಾಡಬೇಕೆಂದು ನಿರ್ಣಯ ಕೈಗೊಂಡಿರುವದು ಸ್ವಾಗತಾರ್ಹ. ಎಲ್ಲರೂ ಸಿಎನ್‍ಸಿ ಯೊಂದಿಗೆ ಕೈಜೋಡಿಸಬೇಕೆಂದು ಸಿಎನ್‍ಸಿ ಬೆಂಬಲಿಗರಾದ ಕುಂಡ್ಯೋಳಂಡ ರಮೇಶ್ ಮುದ್ದಯ್ಯ, ಕಾಟುಮಣಿಯಂಡ ಉಮೇಶ್, ಕುಟ್ಟಂಜೆಟ್ಟಿರ ಪೂಣಚ್ಚ, ಬಿದ್ದಾಟಂಡ ಸಂಪತ್, ಮಣವಟ್ಟಿರ ಜಗದೀಶ್, ಅಪ್ಪಚ್ಚಿರ ಬೋಪಣ್ಣ, ಮಣವಟ್ಟಿರ ಸ್ವರೂಪ್, ಮಣವಟ್ಟಿರ ನಂದಾ ಭೀಮಯ್ಯ ಮನವಿ ಮಾಡಿದ್ದಾರೆ.

ಈ ಬಗ್ಗೆ ನಾಪೆÇೀಕ್ಲು ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಒಂದು ವಾರದ ಹಿಂದೆ ಕೊಡವ ಸಮಾಜದ ಒಕ್ಕೂಟದ ಸಭೆಯಲ್ಲಿ ಕೊಡವ ಬುಡಕಟ್ಟು ಸ್ಥಾನಮಾನಕ್ಕೆ ಆಗ್ರಹಿಸಿ ಎಲ್ಲಾ ಕೊಡವ ಸಮಾಜದವರು ಸಮಾವೇಶ ನಡೆಸಬೇಕು ಎಂದು ನಿರ್ಣಯ ಕೈಗೊಂಡಿರುವದು ಸ್ವಾಗತಾರ್ಹ ವಾಗಿದೆ. ಇದನ್ನು ಸಿಎನ್‍ಸಿ ಸಂಘಟ ನೆಯ ಜತೆಗೂಡಿ ನಡೆಸುವದರಿಂದ ಶೀಘ್ರವಾಗಿ ಫಲ ದೊರೆಯಲಿದೆ. ಸಿಎನ್‍ಸಿ ಸಂಘಟನೆಯು ಈ ಹೋರಾಟದಲ್ಲಿ ಮುಂಚೂಣಿ ಯಲ್ಲಿದ್ದು, ಅಂತಿಮ ಆದೇಶ ಮಾತ್ರ ಬರಬೇಕಾಗಿದೆ. ಕೊಡವ ಜನಾಂಗಕ್ಕೆ ಸಂವಿಧಾನಕ್ಕೆ ಒಳಪಟ್ಟ ಎಲ್ಲಾ ಹಕ್ಕುಗಳನ್ನು ಪಡೆಯುವ ಅರ್ಹತೆಯಿದೆ. ಇದರಿಂದ ಜನಾಂಗದ ಮುಂದಿನ ಪೀಳಿಗೆ ದೇಶದಲ್ಲಿ ಸುರಕ್ಷಿತವಾಗಿ ಮತ್ತು ಸು ಭದ್ರವಾಗಿ ಬದುಕಲು ಸಾಧ್ಯವಾಗಲಿದೆ ಎಂದರು. ನಮ್ಮ ಹೋರಾಟ ನಮ್ಮ ಹಕ್ಕುಗಳಿಗಾಗಿ ಮಾತ್ರವಲ್ಲದೆ ಯಾವದೇ ಜಾತಿ, ಜನಾಂಗಕ್ಕೆ ವಿರುದ್ಧವಾಗಿ ಅಲ್ಲ ಎಂದು ಈ ಸಂದರ್ಭದಲ್ಲಿ ಅವರು ತಿಳಿಸಿದರು.