ಮಡಿಕೇರಿ, ಮಾ. 22: ನಗರದ ದೇಚೂರಿನಲ್ಲಿ ನಕಲಿ ಆಯುರ್ವೇದಿಕ್ ಔಷಧಿ ನೀಡಿ, ಹೆಚ್ಚಿನ ಔಷಧಕ್ಕಾಗಿ ರೂ. 8,76,000 ಚೆಕ್ ಪಡೆದು ಮಹಿಳೆಯೊಬ್ಬರನ್ನು ವಂಚಿಸಿದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ದೇಚೂರಿನ ಮಹಿಳೆಯೊಬ್ಬರನ್ನು ತಾ. 27.12.2019 ರಂದು ಬೆಳಿಗ್ಗೆ 10.30 ಗಂಟೆಗೆ ಹುಬ್ಬಳಿನವಳಾಗುಂದ ನಗರದ ರಮೇಶ ಹಾಗೂ ಹುಬ್ಬಳಿಗೋಪನ್‍ಕೊಪ್ಪದ ಭರತ್ ಎಂಬವರುಗಳು ಪರಿಚಯಿಸಿಕೊಂಡು ನಕಲಿ ಆಯುರ್ವೇದಿಕ್ ಔಷಧವನ್ನು ನೀಡಿ ಹೆಚ್ಚಿನ ಆಯುರ್ವೇದ ಔಷಧಕ್ಕಾಗಿ ಒಟ್ಟು ರೂ. 8,76,000 ಖರ್ಚಾಗುತ್ತದೆ ಎಂದು ತಿಳಿಸಿ ರೂ. 8,76,000 ರೂಪಾಯಿಯ ಚೆಕ್ಕನ್ನು ಪಡೆದು ವಂಚಿಸಿದ್ದು, ಈ ಬಗ್ಗೆ ಆರೋಪಿಗಳ ವಿರುದ್ಧ ಮಡಿಕೇರಿ ನಗರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆ ಕೈಗೊಂಡ ಪೊಲೀಸರು ಆರೋಪಿ ಗಳನ್ನು ಬಂಧಿಸಿದ್ದು, ಆರೋಪಿಗಳಿಂದ ಒಟ್ಟು ರೂ. 1,40,000 ನಗದು ಹಣವನ್ನು ಮತ್ತು ಆರೋಪಿಗಳ ವಶದಲ್ಲಿದ್ದ 5 ಮೊಬೈಲ್ ಫೋನ್‍ಗಳನ್ನು ವಶಪಡಿಸಿ ಕೊಂಡಿದ್ದಾರೆ.

ಪೊಲೀಸ್ ಅಧೀಕ್ಷಕಿ ಡಾ. ಸುಮನ್ ಅವರ ನಿರ್ದೇಶನದಂತೆ ಮಡಿಕೇರಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಬಿ.ಪಿ. ದಿನೇಶ್ ಕುಮಾರ್ ಮಾರ್ಗದರ್ಶನ ದಲ್ಲಿ ಮಡಿಕೇರಿ ನಗರ ವೃತ್ತದ ನಿರೀಕ್ಷಕ ಅನೂಪ್ ಮಾದಪ್ಪ ನೇತೃತ್ವದಲ್ಲಿ ಮಡಿಕೇರಿ ನಗರ ಉಪ ನಿರೀಕ್ಷಕ ಸದಾಶಿವ ಎಂ.ಕೆ. ಮತ್ತು ಸಿಬ್ಬಂದಿಗಳಾದ ದಿನೇಶ್ ಕೆ.ಕೆ., ಶ್ರೀನಿವಾಸ, ಪ್ರವೀಣ್ ಬಿ.ಕೆ., ನಾಗರಾಜ್ ಕಡಗನ್ನವರ್, ನಂದಕುಮಾರ್, ಸೌಮ್ಯ, ಜಿಲ್ಲಾ ಪೊಲೀಸ್ ಕಚೇರಿಯ ಸಿ.ಕೆ ರಾಜೇಶ್ ಮತ್ತು ಗಿರೀಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.