ಮಡಿಕೇರಿ, ಮಾ. 21: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ತಾ. 22ರಂದು (ಇಂದು) ಜನತಾ ಕಫ್ರ್ಯೂಗೆ ಪ್ರಧಾನಿ ಮೋದಿ ಕರೆ ನೀಡಿದ್ದು, ಬೆಳಿಗ್ಗೆ 7 ರಿಂದ ರಾತ್ರಿ 9 ಗಂಟೆಯವರೆಗೆ ಮನೆಗಳಲ್ಲೇ ಇರುವಂತೆ ಮನವಿ ಮಾಡಿದ್ದು, ಜನತಾ ಕಫ್ರ್ಯೂಗೆ ಮುನ್ನ ದಿನವೇ ಜಿಲ್ಲೆಯ ಹಲವು ಅಂಗಡಿ ಮುಂಗಟ್ಟುಗಳು ಮುಚ್ಚಲ್ಪಟ್ಟಿದ್ದವು. ಮಡಿಕೇರಿ ನಗರ ವ್ಯಾಪ್ತಿಯಲ್ಲಿಯೂ ಬಹಳಷ್ಟು ಅಂಗಡಿ ಹೊಟೇಲ್‍ಗಳು, ವ್ಯಾಪಾರ ಮಳಿಗೆಗಳು ಮುಚ್ಚಲ್ಪಟ್ಟಿದ್ದವು. ತೆರೆಯಲ್ಲಟ್ಟಿದ್ದ ಅಂಗಡಿ, ಹೊಟೇಲ್ ಮತ್ತಿತರ ಮಳಿಗೆಗಳಲ್ಲಿ ನೂಕುನುಗ್ಗಲು ಕಂಡುಬಂತು.