ಮಡಿಕೇರಿ, ಮಾ. 21: ವಿಶೇಷ ಐತಿಹ್ಯ ಹೊಂದಿರುವ ದೇವರಪುರ ಹೆಬ್ಬಾಲೆ ಶ್ರೀ ಅಯ್ಯಪ್ಪ - ಭದ್ರಕಾಳಿ ದೇವಸ್ಥಾನದಲ್ಲಿ ತಾ. 23ರಂದು ನಡೆಯಬೇಕಿದ್ದ ವಾರ್ಷಿಕ ಸಾಮೂಹಿಕ ಮಹಾಪೂಜೆ ಹಾಗೂ ಮಹಾರುದ್ರಾಭಿಷೇಕ ಕಾರ್ಯವನ್ನು ಮುಂದೂಡಲಾಗಿದೆ ಎಂದು ದೇವಾಲಯ ಸಮಿತಿ ತಿಳಿಸಿದೆ.
ಈ ಕುರಿತು ಮಾಹಿತಿ ನೀಡಿರುವ ತಕ್ಕಮುಖ್ಯಸ್ಥರಾದ ಸಣ್ಣುವಂಡ ರಜನ್ ತಿಮ್ಮಯ್ಯ ಅವರು ಕೊರೊನಾ ಹರಡುವಿಕೆಯನ್ನು ತಡೆಗಟ್ಟಲು ನಡೆಯುತ್ತಿರುವ ಪ್ರಯತ್ನವನ್ನು ಬೆಂಬಲಿಸಿ ಈ ಕೈಂಕರ್ಯವನ್ನು ಮುಂದೂಡಿರುವುದಾಗಿ ತಿಳಿಸಿದ್ದಾರೆ. ಸಾಂಕೇತಿಕ ಪೂಜೆ ನಡೆಯಬೇಕಿರುವುದರಿಂದ ಸಮಿತಿ ಸದಸ್ಯರ ಹಾಜರಾತಿಯನ್ನು ಅಪೇಕ್ಷಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.