ಮಡಿಕೇರಿ, ಮಾ. 17: ಚಿತ್ರಾವತಿ ಬಿ.ಐ.ರವರು ಜಿಲ್ಲಾಮಟ್ಟದ ಸರಕಾರಿ ನೌಕರರ ಕ್ರೀಡಾಕೂಟದಲ್ಲಿ ಭಾಗವಹಿಸಿ ಸತತವಾಗಿ ನಾಲ್ಕು ವರ್ಷಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಪ್ರಥಮ, ಕರ್ನಾಟಕ ಲಘು ಶಾಸ್ತ್ರೀಯ ಸಂಗೀತದಲ್ಲಿ ಪ್ರಥಮ, ಹಿಂದೂಸ್ತಾನಿ ಲಘು ಶಾಸ್ತ್ರೀಯ ಸಂಗೀತದಲ್ಲಿ ಪ್ರಥಮ ಸ್ಥಾನವನ್ನು ಪಡೆದು ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಕೊಡಗನ್ನು ಪ್ರತಿನಿಧಿಸುತ್ತಿದ್ದಾರೆ.

ಸರಕಾರಿ ವೈದ್ಯಕೀಯ ಕಾಲೇಜು ಮಡಿಕೇರಿಯಲ್ಲಿ ಶುಶ್ರೂಷಕಿಯಾಗಿರುವ ಚಿತ್ರಾವತಿ ಅವರು ರೋಗಿಗಳ ಸೇವೆಯೊಂದಿಗೆ ಸರೋಜ ಸುಧಾಕರ ಅವರ ಬಳಿ ಸಂಗೀತಾಭ್ಯಾಸವನ್ನು ಮಾಡುತ್ತಿದ್ದು, ಹಲವಾರು ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ.

ಇವರು ಸರಕಾರಿ ಶುಶ್ರೂಷಕ ಸಂಘ ಕೊಡಗು ಘಟಕದ ಸಾಂಸ್ಕøತಿಕ ಕಾರ್ಯದರ್ಶಿ ಹಾಗೂ ಜಿಲ್ಲಾ ಘಟಕ ಸರಕಾರಿ ನೌಕರರ ಸಂಘದ ಉಪಾಧ್ಯಕ್ಷರಾಗಿದ್ದಾರೆ. ಇವರು ಮೂರ್ನಾಡು ಸರಕಾರಿ ಆಸ್ಪತ್ರೆಯ ನೇತ್ರಾಧಿಕಾರಿ ರವಿ ಆರ್ಯನ್ ಅವರ ಪತ್ನಿ.