ಸಿದ್ದಾಪುರ, ಮಾ.18: ಚಿಟ್ ಫಂಡ್‍ಗೆ ಹಣ ಹೂಡಿದ ವ್ಯಾಪಾರಿಗೆ ವಂಚನೆ ಮಾಡಿರುವ ಪ್ರಕರಣ ಸಂಬಂಧ ಕುಶಾಲನಗರದ ನಿವಾಸಿಯೊಬ್ಬರ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿದ್ದಾಪುರದ ಫರ್ನೀಚರ್ ಅಂಗಡಿಯೊಂದರ ಮಾಲೀಕ ಜೇಕಬ್ ಎಂಬವರು ಕುಶಾಲನಗರದ ನಿವಾಸಿ ಪಿ. ರವೀಂದ್ರ ಎಂಬವರಿಗೆ ಸೇರಿದ ರವಿ ಚಿಟ್ ಫಂಡ್ ಎಂಬ ಫಂಡಿಗೆ ಹಣ ಹೂಡಿಕೆ ಮಾಡುತ್ತಿದ್ದರು ಎನ್ನಲಾಗಿದೆ. ಜೇಕಬ್ ಕಳೆದ ಆರು ವರ್ಷಗಳಿಂದ ಮಾಸಿಕ 50 ಸಾವಿರದಂತೆ ರವೀಂದ್ರ ಎಂಬವರಿಗೆ ಹಣ ಪಾವತಿಸುತ್ತಿದ್ದರು ಎನ್ನಲಾಗಿದ್ದು; ಇದೀಗ ಒಟ್ಟು 35 ಲಕ್ಷ ರೂಪಾಯಿ ಹಣವನ್ನು ನೀಡದೆ ರವೀಂದ್ರ ಅವರು ವಂಚನೆ ಮಾಡಿದ್ದಾರೆ ಎಂದು ನ್ಯಾಯಾಲಯದ ಮೂಲಕ ಮುಖಾಂತರ ಖಾಸಗಿ ಮೊಕದ್ದಮೆ ಹೂಡಿದ್ದರು. ನ್ಯಾಯಾಲಯವು ಪ್ರಕರಣವನ್ನು ಸಿದ್ದಾಪುರ ಠಾಣೆಗೆ ವರ್ಗಾಯಿಸಿದ್ದು, ಈ ಹಿನ್ನಲೆಯಲ್ಲಿ ರವೀಂದ್ರ ವಿರುದ್ಧ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.