ಮಡಿಕೇರಿ, ಮಾ. 18 : ನಗರದ ರಾಜಾಸೀಟ್‍ನಲ್ಲಿರುವ ಮಕ್ಕಳ ರೈಲು ಸ್ಥಗಿತಗೊಂಡಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ? ಬಂದಿದ್ದಲ್ಲಿ ಇದಕ್ಕೆ ಕಾರಣಗಳೇನು? ಎಂದು ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಅವರು ಪೌರಾಡಳಿತ, ತೋಟಗಾರಿಕೆ ಹಾಗೂ ರೇಷ್ಮೆ ಸಚಿವರನ್ನು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಸಚಿವರು ರೈಲ್ವೆ ಇಲಾಖೆ, ಮೈಸೂರು ಅವರ ಪತ್ರದ ಸಂಖ್ಯೆ ವೈ.ಎಂ.271/ವಿ/ಬಿ.ಜಿ.ದಿನಾಂಕ:-09-08-2018 ರಲ್ಲಿ ಪುಟಾಣಿ ರೈಲಿನ ನಿಯತಕಾಲಿಕ ತಪಾಸಣೆ ವರದಿಯಲ್ಲಿ ಹಾಲಿ ಇರುವ ಪುಟಾಣಿ ರೈಲಿನಲ್ಲಿ ಗೇರ್ ಬಾಕ್ಸ್, ಹೈಡ್ರಾಲಿಕ್ ಪವರ್ ಟ್ರಾನ್ಸ್‍ಮಿಷನ್, ಲೀಫ್ ಸ್ಪ್ರಿಂಗ್‍ಗಳು, ಸೆಂಟರ್ ಪಿಓಟ್‍ಗಳು ಮತ್ತು ರೈಲ್ವೆ ಬಾಡಿ 28 ವರ್ಷ ಹಳೆಯದಾಗಿರುವುದರಿಂದ ಶಿಥಿಲಗೊಂಡು, ತಾಂತ್ರಿಕ ದೋಷದಿಂದ ಕೂಡಿದ್ದು, ಪ್ರಯಾಣಿಕರ ಹಿತದೃಷ್ಟಿಯಿಂದ ಸ್ಥಗಿತಗೊಳಿಸುವಂತೆ ತಿಳಿಸಿರುತ್ತಾರೆ. ಹಳೆಯ ರೈಲಿನ ದುರಸ್ತಿಯ ಬದಲು ಪ್ರವಾಸಿಗರ ಸುರಕ್ಷತಾ ಹಿತದೃಷ್ಟಿಯಿಂದ ಹೊಸದಾಗಿ ರೈಲನ್ನು ಖರೀದಿಸಿ ಚಾಲನೆಮಾಡಲು ವರದಿಯಲ್ಲಿ ಸೂಚಿಸಿರುವುದರಿಂದ ಮಕ್ಕಳ ರೈಲನ್ನು ಸುಮಾರು 515 ದಿನಗಳಿಂದ ಸ್ಥಗಿತಗೊಳಿಸಲಾಗಿದೆ.

ಪುಟಾಣಿ ರೈಲನ್ನು ಹೊಸದಾಗಿ ಖರೀದಿಸುವುದರ ಜೊತೆಗೆ ಟ್ರ್ಯಾಕ್ ರೀ ಅಸೆಂಬ್ಲಿಂಗ್, ಇನ್‍ಸ್ಟಾಲೇಷನ್ ಆಫ್ ಪ್ಲೇಯಿಂಗ್ ಇಕ್ಯೂಪ್‍ಮೆಂಟ್ಸ್, ಪ್ರೊವ್ಶೆಡಿಂಗ್ ವಾಕ್‍ವೇ, ಎಂಎಸ್ ಗ್ರಿಲ್ ಪೆಚಿಚಿಂಗ್ ಅಚಿಡ್ ಕನ್‍ಸ್ರಕ್ಷನ್ ಆಪ್ ನ್ಯೂ ಪ್ಲಾಟ್‍ಪಾರಂ ಅಂಡ್ ಕಮರ್ಸಿಯಲ್ ಸಾಪ್ಸ್ ಒಳಗೊಂಡಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ, ಪುಟಾಣಿ ರೈಲು ಚಲಿಸುವ ಹಾದಿಯ ಬದಿಗಳಲ್ಲಿ ಅಲಂಕೃತಗೊಳಿಸಲು ವಿಸ್ತøತ ಯೋಜನಾ ವರದಿಯನ್ನು (ಡಿ.ಪಿ.ಆರ್.) ತಯಾರಿಸಿ, ರೈಲ್ವೆ ಇಲಾಖೆ ಮೈಸೂರು ವಿಭಾಗ, ಡಿ.ಆರ್.ಎಂ. ಕಚೇರಿಗೆ ತಾಂತ್ರಿಕ ಪರಿಶೀಲನೆಗಾಗಿ ಕೊಡಗು ಜಿಲ್ಲಾಧಿಕಾರಿಗಳ ಕಚೇರಿಯಿಂದ 2019ರ ಅಕ್ಟೋಬರ್ 28 ರಲ್ಲಿ ಸಲ್ಲಿಸಲಾಗಿದೆ. ರೈಲ್ವೆ ಇಲಾಖೆಯಿಂದ ಅನುಮೋದನೆಯಾದ ನಂತರ ಅನುದಾನ ಲಭ್ಯತೆ ಆಧಾರದ ಮೇಲೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ನಾರಾಯಣ ಗೌಡ ತಿಳಿಸಿದರು.