ಸುಂಟಿಕೊಪ್ಪ: ಮಹಿಳೆಯರು ಇಂದು ಎಲ್ಲಾ ಕ್ಷೇತ್ರದಲ್ಲೂ ಛಾಪು ಮೂಡಿಸುತ್ತಿದ್ದು ಹಿಂದಿನ ಕಾಲದಲ್ಲಿ ದಿನಕೂಲಿ ಮಹಿಳಾ ಕಾರ್ಮಿಕರಿಗೆ ಕನಿಷ್ಟ ವೇತನ ನೀಡುತ್ತಿರುವುದನ್ನು ಮನಗಂಡು ಮಹಿಳೆಯರು ನಡೆಸಿದ ಹೋರಾಟದ ಫಲವಾಗಿ ವಿಶ್ವ ಮಹಿಳಾ ದಿನಾಚರಣೆಯನ್ನು ಜಾರಿಗೆ ತರಲಾಯಿತು ಎಂದು ಸಹಕಾರಿ ಮಹಿಳಾ ಸಮಾಜದ ನಿರ್ದೇಶಕಿ ಸಾವಿತ್ರಿ ಕಾವೇರಪ್ಪ ತಿಳಿಸಿದರು.
ಜ್ಞಾನಧಾರ ಶಿಶು ಕೇಂದ್ರದ ಸಭಾಂಗಣದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆಯನ್ನುದ್ದೇಶಿಸಿ ಮಾತನಾಡಿದರು.
ಸಮಾಜದ ಅಧ್ಯಕ್ಷೆ ಲೀಲಾಮೇದಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ ಮಹಿಳೆಯರ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ನಡೆಯುತ್ತಿದೆ ಎಂದು ವಿಷಾಧಿಸಿದರು.
ಸಮಾರಂಭದಲ್ಲಿ ಹಿರಿಯರಾದ ಗಂಗೂ ಬಾಯಿ ಕರುಂಬಯ್ಯ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಜ್ಞಾನಧಾರ ಶಿಶು ಕೇಂದ್ರದ ಮುಖ್ಯ ಶಿಕ್ಷಕಿ ಶಾಂತಿ ದೇವರಾಜ್. ಪಟ್ಟೆ ಮನೆ ಗಿರಿಜಾ ಉದಯ. ಶೀಲಾವತಿ ಬೋಪಣ್ಣ, ಕೊಂಗೇಟಿರ ರಾಣಿ. ಸಬಿತಾ ನಾಣಯ್ಯ ಹಾಗೂ ಮಹಿಳಾ ಸಂಘದ ಸದಸ್ಯೆಯರು ಉಪಸ್ಥಿತರಿದ್ದರು.
ಚೆಟ್ಟಳ್ಳಿ: ಕುಶಾಲನಗರದ ನಿಸರ್ಗಧಾಮ ಟೂರಿಸ್ಟ್ ಸೆಂಟರ್ನಲ್ಲಿ ಇತ್ತೀಚೆಗೆ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಎನ್.ಟಿ.ಸಿ. ಕಾನ್ಫರೆನ್ಸ್ ಹಾಲ್ನಲ್ಲಿ ನಡೆದ ಕಾರ್ಯಕ್ರಮವನ್ನು ಮಹಿಳಾ ಸಮಾಜದ ಅಧ್ಯಕ್ಷೆ ಸಲೀನ ಡಿ. ಕುನ್ನಾ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಮಹಿಳಾ ಸಬಲೀಕರಣದ ಬಗ್ಗೆ ಮಹಿಳೆಯವರಿಗೆ ಮಾಹಿತಿ ನೀಡಿದರು.
ಎನ್.ಟಿ.ಸಿ. ಮಾಲೀಕ ಅಬ್ದುಲ್ ಸಲಾಂ ಮಾತನಾಡಿದರು. ಎನ್.ಟಿ.ಸಿ. ಸಿಬ್ಬಂದಿಗಳಾದ ಮಧು ಹಾಗೂ ಮಂಜುಳಾ, ಎನ್.ಟಿ.ಸಿ.ಯಲ್ಲಿ ಮಹಿಳೆಯವರಿಗೆ ಸೂಕ್ತ ಸುರಕ್ಷತೆಯನ್ನು ಒದಗಿಸುವುದರ ಜೊತೆಗೆ ಮಹಿಳೆಯವರಿಗೆ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತಿದೆ ಎಂದರು.
ನಿಸರ್ಗಧಾಮ ಟೂರಿಸ್ಟ್ ಸೆಂಟರ್ನ ಮಹಿಳೆಯರಿಗೆ ಮಹಿಳಾ ದಿನದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ, ರಂಗೋಲಿ ಸ್ಪರ್ಧೆ, ಮಡಿಕೆ ಹೊಡೆಯುವ ಆಟ, ಸ್ಟೆಪ್ ಆಂಡ್ ಸ್ಟೆಪ್, ಮ್ಯೂಸೊಕಲ್ ಚೇರ್ ಮುಂತಾದ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆಯ ವಿಜೇತರಿಗೆ ಎನ್.ಟಿ.ಸಿ. ಮಾಲೀಕರ ಪತ್ನಿ ಆಶಾ ಸಲಾಂ ಬಹುಮಾನ ವಿತರಿಸಿದರು.
ಬಳಿಕ ಎನ್.ಟಿ.ಸಿ. ಸಿಬ್ಬಂದಿಗಳಿಗೆ ವಿಮೆಯನ್ನು ಮಾಲೀಕ ಅಬ್ದುಲ್ ಸಲಾಂ ಅವರು ವಿತರಿಸಿದರು. ಈ ಸಂದರ್ಭ ಎನ್.ಟಿ.ಸಿ. ವ್ಯವಸ್ಥಾಪಕ ಹಕೀಂ, ಕಚೇರಿ ಮುಖ್ಯಸ್ಥೆ ಲಲಿತಾ, ಎನ್.ಟಿ.ಸಿ. ವರ್ತಕರಾದ ಸತೀಶ್, ಸಂಜೀವ್, ಶಾಫಿ ಹಾಗೂ ಎನ್.ಟಿ.ಸಿ. ಮಹಿಳಾ ಸಿಬ್ಬಂದಿಗಳು ಇದ್ದರು.