(ವಿಶೇಷ ವರದಿ : ಹೆಚ್. ಕೆ. ಜಗದೀಶ್)
ಗೋಣಿಕೊಪ್ಪಲು. ಮಾ, 16: ಆಧುನಿಕ ಯುಗದಲ್ಲಿ ಶಿಕ್ಷಣ ಕ್ಷೇತ್ರ ಭಾರಿ ಬದಲಾವಣೆ ಕಂಡಿದ್ದರೂ ಸರ್ಕಾರದ ಮಟ್ಟದಲ್ಲಿ ನಡೆಯುತ್ತಿರುವ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖಾ ವ್ಯಾಪ್ತಿಗೆ ಬರುವ ಆಶ್ರಮ ಶಾಲೆಯಲ್ಲಿ ವಿದ್ಯಾರ್ಜನೆ ಮಾಡುತ್ತಿರುವ ಬಹುತೇಕ ಆದಿವಾಸಿಗಳ ಕುಟುಂಬದ ವಿದ್ಯಾರ್ಥಿಗಳು ಕಲಿಕೆ ಮಟ್ಟದಿಂದ ಬಹಳ ಹಿಂದುಳಿದಿದ್ದಾರೆ. ಸರ್ಕಾರ ಇವರ ಶಿಕ್ಷಣಕ್ಕಾಗಿ ಕೋಟ್ಯಂತರ ಹಣವನ್ನು ವಿನಿಯೋಗಿಸಿದ್ದರೂ ಇವರ ಕಲಿಕೆ ಮಟ್ಟ ಮಾತ್ರ ಸುಧಾರಣೆ ಕಾಣುತ್ತಿಲ್ಲ. ಬೆರಳೆಣಿಕೆಯ ವಿದ್ಯಾರ್ಥಿಗಳು ಹೊರತು ಪಡಿಸಿದರೆ ಬಹುತೇಕ ವಿದ್ಯಾರ್ಥಿಗಳು 7ನೇ ತರಗತಿಯ ನಂತರ ತಮ್ಮ ಶಿಕ್ಷಣವನ್ನು ಮೊಟಕುಗೊಳಿಸಿ ಕೂಲಿ ಕೆಲಸದತ್ತ ಮುಖ ಮಾಡುತ್ತಿದ್ದಾರೆ. ಇವರ ಏಳಿಗೆಗಾಗಿ ಸರ್ಕಾರಗಳು ಅನೇಕ ಯೋಜನೆಗಳನ್ನು ಬಳಸಿದರಾದರೂ ಫಲಿತಾಂಶ ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಗುರಿ ಮುಟ್ಟಲಿಲ್ಲ.
ಪ್ರಾಥಮಿಕ ಹಂತದಲ್ಲಿ ಸರಿಯಾದ ರೀತಿಯಲ್ಲಿ ಕಲಿಕಾ ಮಟ್ಟ ಸುಧಾರಣೆಯಾಗದ ಕಾರಣ ಆದಿವಾಸಿ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಪ್ರೌಢ ಶಿಕ್ಷಣ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ವಿದ್ಯಾರ್ಥಿಗಳ ಯೋಗ ಕ್ಷೇಮ ವಿಚಾರಿಸಲು ಆಶ್ರಮ ಶಾಲೆಗೆ ಆಗಮಿಸುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಲಭ್ಯವಾಗುವ ಆಹಾರ ಪದಾರ್ಥಗಳ ಗುಣಮಟ್ಟ, ವಿತರಣೆ ಸರಿಯಾದ ರೀತಿಯಲ್ಲಿ ನಡೆಯುತ್ತಿದೆಯೇ.? ಎಂಬ ವಿಷಯವನ್ನಷ್ಟೆ ಪ್ರಸ್ತಾಪಿಸುತ್ತಾರೆ ವಿನಾಃ ತಮ್ಮ ಕಲಿಕಾ ಶಿಕ್ಷಣ ಅಭ್ಯಾಸದ ಬಗ್ಗೆ ವಿಚಾರಿಸುವುದು ಅತೀ ವಿರಳ. ವಿದ್ಯಾರ್ಥಿಗಳ ಕಲಿಕೆಯ ಮಟ್ಟದ ಬಗ್ಗೆ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಹೆಚ್ಚಾಗಿ ತಲೆ ಕೆಡಿಸಿ ಕೊಂಡಂತಿಲ್ಲ. ಇದರಿಂದ ಸಹಜವಾಗಿಯೇ ಆಶ್ರಮ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ನಿರ್ವಹಿಸುವ ಶಿಕ್ಷಕರು ಬಹುತೇಕ ಮಂದಿ ವಿದ್ಯಾರ್ಥಿಗಳಿಗೆ ಒದಗಿಸ ಲಾಗುವ ಆಹಾರ ಹಾಗೂ ಇನ್ನಿತರ ವಸ್ತುಗಳ ಬಗ್ಗೆ ಆಸಕ್ತಿ ವಹಿಸುತ್ತಿದ್ದರೆ ವಿನಃ ಪಾಠ ಪ್ರವಚನದಲ್ಲಿ ಅಷ್ಟಾಗಿ ಪ್ರಗತಿ ಸಾಧಿಸಲು ಸಾಧ್ಯವಾಗುತ್ತಿಲ್ಲ. ಊಟ ವಸತಿಯೊಂದಿಗೆ ಶಿಕ್ಷಣ ನೀಡುವ ಆಶ್ರಮ ಶಾಲೆಯಲ್ಲಿ ವಿದ್ಯಾರ್ಜನೆ (ವಿಶೇಷ ವರದಿ : ಹೆಚ್. ಕೆ. ಜಗದೀಶ್)

ಪ್ರಾಥಮಿಕ ಹಂತದಲ್ಲಿ ಸರಿಯಾದ ರೀತಿಯಲ್ಲಿ ಕಲಿಕಾ ಮಟ್ಟ ಸುಧಾರಣೆಯಾಗದ ಕಾರಣ ಆದಿವಾಸಿ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಪ್ರೌಢ ಶಿಕ್ಷಣ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ವಿದ್ಯಾರ್ಥಿಗಳ ಯೋಗ ಕ್ಷೇಮ ವಿಚಾರಿಸಲು ಆಶ್ರಮ ಶಾಲೆಗೆ ಆಗಮಿಸುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಲಭ್ಯವಾಗುವ ಆಹಾರ ಪದಾರ್ಥಗಳ ಗುಣಮಟ್ಟ, ವಿತರಣೆ ಸರಿಯಾದ ರೀತಿಯಲ್ಲಿ ನಡೆಯುತ್ತಿದೆಯೇ.? ಎಂಬ ವಿಷಯವನ್ನಷ್ಟೆ ಪ್ರಸ್ತಾಪಿಸುತ್ತಾರೆ ವಿನಾಃ ತಮ್ಮ ಕಲಿಕಾ ಶಿಕ್ಷಣ ಅಭ್ಯಾಸದ ಬಗ್ಗೆ ವಿಚಾರಿಸುವುದು ಅತೀ ವಿರಳ. ವಿದ್ಯಾರ್ಥಿಗಳ ಕಲಿಕೆಯ ಮಟ್ಟದ ಬಗ್ಗೆ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಹೆಚ್ಚಾಗಿ ತಲೆ ಕೆಡಿಸಿ ಕೊಂಡಂತಿಲ್ಲ. ಇದರಿಂದ ಸಹಜವಾಗಿಯೇ ಆಶ್ರಮ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ನಿರ್ವಹಿಸುವ ಶಿಕ್ಷಕರು ಬಹುತೇಕ ಮಂದಿ ವಿದ್ಯಾರ್ಥಿಗಳಿಗೆ ಒದಗಿಸ ಲಾಗುವ ಆಹಾರ ಹಾಗೂ ಇನ್ನಿತರ ವಸ್ತುಗಳ ಬಗ್ಗೆ ಆಸಕ್ತಿ ವಹಿಸುತ್ತಿದ್ದರೆ ವಿನಃ ಪಾಠ ಪ್ರವಚನದಲ್ಲಿ ಅಷ್ಟಾಗಿ ಪ್ರಗತಿ ಸಾಧಿಸಲು ಸಾಧ್ಯವಾಗುತ್ತಿಲ್ಲ. ಊಟ ವಸತಿಯೊಂದಿಗೆ ಶಿಕ್ಷಣ ನೀಡುವ ಆಶ್ರಮ ಶಾಲೆಯಲ್ಲಿ ವಿದ್ಯಾರ್ಜನೆ ತಲಾ 2ರಂತೆ 12 ಪ್ರಶ್ನೆಗಳಿಗೆ ಉತ್ತರಿಸುವ ಜವಾಬ್ದಾರಿ ಶಿಕ್ಷಕರ ಹೆಗಲಿಗೆ ಹೊರಿಸಲಾಗಿದೆ. ಪ್ರತಿ ದಿನದ ಪ್ರಶ್ನೆಗಳನ್ನು ಒಟ್ಟುಗೂಡಿಸಿ ಕಚೇರಿಯಿಂದಲೇ ಪ್ರಶ್ನೆ ಪತ್ರಿಕೆ ತಯಾರಿಸಿ ತಾಲೂಕಿನ ವಿವಿಧ ಭಾಗದಲ್ಲಿರುವ ಆಶ್ರಮ ಶಾಲೆಗಳಿಗೂ ಏಕ ರೂಪದಲ್ಲಿ ಪ್ರಶ್ನೆ ಪತ್ರಿಕೆ ವಿತರಿಸುವ ಕಾರ್ಯ ನಡೆಸಿದ್ದಾರೆ. ಇದರಿಂದ ಪ್ರತಿ ತಿಂಗಳು ಇಲಾಖೆಯಿಂದಲೇ ಪರೀಕ್ಷೆ ನಡೆಸುವ ಜವಾಬ್ದಾರಿ ಅಧಿಕಾರಿ ವಹಿಸಿಕೊಂಡಿದ್ದಾರೆ.
ವಿದ್ಯಾರ್ಥಿಗಳು ಪ್ರಶ್ನೆಗಳಿಗೆ ಉತ್ತರಿಸುವ ಉತ್ತರ ಪತ್ರಿಕೆಗಳನ್ನು ಒಟ್ಟು ಮಾಡಿ ಕಚೇರಿಗೆ ತಂದ ನಂತರ ಶಾಲೆಯನ್ನು ಅದಲು ಬದಲು ಮಾಡಿ ಶಿಕ್ಷಕರಿಂದಲೇ ಮೌಲ್ಯ ಮಾಪನ ಮಾಡಲಾಗುತ್ತದೆ. ಈ ಮೂಲಕ ವಿದ್ಯಾರ್ಥಿಗಳ ಕಲಿಕಾ ಮಟ್ಟದ ಸುಧಾರಣೆಯನ್ನು ಮೌಲ್ಯ ಮಾಪನ ಮಾಡಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಸಹಜವಾಗಿಯೇ ಕಲಿಕಾ ಸಾಮಥ್ರ್ಯ ಹಂತ ಹಂತವಾಗಿ ಹೆಚ್ಚಾಗುತ್ತಿದೆ. ಪ್ರತಿ ಪ್ರಶ್ನೆಗಳಿಗೂ ಕೂಡ ಉತ್ತರಿಸುವ ಪ್ರಯತ್ನ ವಿದ್ಯಾರ್ಥಿಗಳಿಂದ ನಡೆಯುತ್ತಿದೆ. ಪೋಷಕರಲ್ಲಿ ತಮ್ಮ ಮಕ್ಕಳ ಕಲಿಕಾ ಮಟ್ಟ ಸುಧಾರಣೆ ಕಂಡು ಹರ್ಷಗೊಂಡಿದ್ದಾರೆ. ಮಕ್ಕಳ ಕಲಿಕೆಯ ಬಗ್ಗೆ ಅಧಿಕಾರಿಗಳಿಗೆ ಕಾಳಜಿ ಇದ್ದಲ್ಲಿ ಇಂತಹ ಪ್ರಯತ್ನಗಳು ಯಶಸ್ವಿಯಾಗುತ್ತದೆ ಎಂಬುದಕ್ಕೆ ವೀರಾಜಪೇಟೆ ತಾಲೂಕಿನ ವಿವಿಧ ಭಾಗದ ಆಶ್ರಮ ಶಾಲೆಗಳಲ್ಲಿ ವಿದ್ಯಾರ್ಜನೆ ಮಾಡುತ್ತಿರುವ ವಿದ್ಯಾರ್ಥಿಗಳೇ ನಮ್ಮ ಮುಂದಿರುವ ಉದಾಹರಣೆ.