ನಾಪೆÇೀಕ್ಲು, ಮಾ. 16: ತಾ. 17ರಿಂದ 21ರ ವರೆಗೆ ನಾಪೆÇೀಕ್ಲು ಶ್ರೀ ಭಗವತಿ ದೇವರ ವಾರ್ಷಿಕ ಉತ್ಸವ ನಡೆಯಲಿದೆ. ತಾ. 17ರಂದು ಸಂಜೆ ದೀಪಾರಾಧನೆ, ರಾತ್ರಿ ಭದ್ರಕಾಳಿ ದೇವರ ಕೋಲ ನಡೆಯಲಿದೆ. ತಾ. 18ರಂದು ಬೆಳಿಗ್ಗೆ ದೇವರ ಬಲಿ, ಸಂಜೆ ಊರು ಬಲಿ, ತಾ. 19ರಂದು ಪಟ್ಟಣಿ ಹಬ್ಬದ ಪ್ರಯುಕ್ತ ಎತ್ತೇರಾಟ, ಅನ್ನಸಂತರ್ಪಣೆ ನಡೆಯಲಿದೆ. 20ರಂದು ಕಾವೇರಿ ನದಿಯಲ್ಲಿ ದೇವಿಯ ಅವಭೃತ ಸ್ನಾನ, ದೇವಳದಲ್ಲಿ ನೃತ್ಯ ಬಲಿ ನಡೆಯಲಿದ್ದು, ತಾ. 21ರಂದು ಅಜ್ಜಪ್ಪ ಮತ್ತು ವಿಷ್ಣುಮೂರ್ತಿ ದೇವರ ಕೋಲ ಹಾಗೂ ದೇವಳದಲ್ಲಿ ನಡೆಯುವ ಶುದ್ಧ ಕಲಶದೊಂದಿಗೆ ಉತ್ಸವ ಸಂಪನ್ನಗೊಳ್ಳಲಿದೆ.