ಕೂಡಿಗೆ, ಮಾ. 15: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಅಂಗವಾಡಿ ಕೇಂದ್ರ ಆವರಣದಲ್ಲಿ ಅರೋಗ್ಯ ಇಲಾಖೆಯ ವತಿಯಿಂದ ಮಕ್ಕಳ ಪೋಷಣಾ ಅಭಿಯಾನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಕೂಡಿಗೆ ಗ್ರಾಮ ಪಂಚಾಯತಿ ಅಧ್ಯಕ್ಷೆ ನೆರವೇರಿಸಿ ಮಾತನಾಡಿ, ಗರ್ಭಿಣಿ ಮಹಿಳೆಯರು ಇಲಾಖೆಯ ಸವಲತ್ತುಗಳನ್ನು ಪಡೆಯುವ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳಬೇಕೆಂದರು.
ಮುಖ್ಯ ಅತಿಥಿಯಾಗಿದ್ದ ಗ್ರಾಮ ಪಂಚಾಯತಿ ಸದಸ್ಯ ಹೆಚ್.ಎಸ್. ರವಿ ಮಾತಾನಾಡಿ, ಮಕ್ಕಳ ಪೋಷಣೆ ಮಾಡುವ ತಾಯಿಯಂದಿರು ಪಾಲಿಸುವ ಜವಾಬ್ದಾರಿಯನ್ನು ಅರಿವು ಪ್ರಥಮ ಹಂತ ಪೌಷ್ಟಿಕ ಆಹಾರ ಬಳಕೆಯ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭ ಅರೋಗ್ಯ ಇಲಾಖೆಯ ಸಿಬ್ಬಂದಿಗಳು ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದರು.