ವೀರಾಜಪೇಟೆ, ಮಾ. 15: ವೀರಾಜಪೇಟೆ ಸಮೀಪದ ಹೆಗ್ಗಳ ಗ್ರಾಮದ ವೃದ್ಧರ ಅನಾಥಾಶ್ರಮ ಹಾಗೂ ಬುದ್ಧಿಮಾಂದ್ಯ ಜನರು ಇರುವ ಅನಾಥಾಲಯ ಸ್ನೇಹ ಭವನದ ವ್ಯವಸ್ಥಾಪಕರಾಗಿ ವೀರಾಜಪೇಟೆ ಸಂತ ಅನ್ನಮ್ಮ ದೇವಾಲಯದ ಪ್ರಧಾನ ಧರ್ಮಗುರು ರೆ. ಫಾ. ಮದಲೈ ಮುತ್ತು ಅಧಿಕಾರ ವಹಿಸಿಕೊಂಡಿದ್ದಾರೆ.
ಈ ಸಂಧರ್ಭದಲ್ಲಿ ಮಾತ ನಾಡಿದ ಫಾ. ಮದಲೈ ಮುತ್ತು ಈ ಅನಾಥಾಶ್ರಮದಲ್ಲಿ ಸುಮಾರು 17 ಜನರು ಇದ್ದು ಅವರಿಗೆ ಯಾವುದೇ ಕೊರತೆಯಾಗದ ಹಾಗೆ ನೋಡಿಕೊಳ್ಳಲಾಗುವುದು ಎಂದರು.
ಮೈಸೂರು ವಲಯದ ಆರೋಗ್ಯ ಶಿಕ್ಷಣದ ಮುಖ್ಯಸ್ಥರಾದ ರೆ. ಫಾ. ಲೆಸ್ಲಿ ಮೋರಸ್ ಮತ್ತು ಸಹಾಯಕ ಧರ್ಮಗುರು ರೆ. ಫಾ. ರೋಷನ್ ಬಾಬು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.